ಕಲಾವತಿ ದಯಾನಂದ್‌ಗೆ ರಾಜ್ಯ ಮಟ್ಟದ ಗಾನ ಕೋಗಿಲೆ ಪ್ರಶಸ್ತಿ
Update: 2019-09-07 22:00 IST
ಉಡುಪಿ, ಸೆ.7: ಗಾಯನ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಗಾಗಿ ಉಡುಪಿಯ ಗಾಯಕಿ ಕಲಾವತಿ ದಯಾನಂದ್ ಅವರಿಗೆ ಭಾರತೀಯ ಕಲೆ ಸಾಹಿತ್ಯ ಸಾಂಸ್ಕೃತಿಕ ಸಂಘಟನಾ ಸಂಸ್ಥೆ ರಾಯಚೂರಿನ ಕಲಾ ಸಂಕುಲ ಸಂಸ್ಥೆ ನೀಡುವ ರಾಜ್ಯ ಮಟ್ಟದ ಾನ ಕೋಗಿಲೆ ರಾಜ್ಯ ಪ್ರಶಸ್ತಿ ಲಭಿಸಿದೆ.
10 ಸಾವಿರ ರೂ. ನಗದು ಬಹುಮಾನವಿರುವ ಪ್ರಶಸ್ತಿಯನ್ನು ನಾಳೆ ರಾಯಚೂರಿನ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಕಾಯದರ್ರ್ಶಿ ಮಾರುತಿ ಬಡಿಗೇರ್ ತಿಳಿಸಿದ್ದಾರೆ.