ಅಬ್ಬಕ್ಕ ಸೌಹಾರ್ದ, ಸ್ಫೂರ್ತಿಯ ಸಂಕೇತ: ಯು.ಟಿ.ಖಾದರ್

Update: 2019-09-07 16:41 GMT

ಮಂಗಳೂರು, ಸೆ.7: ಅಬ್ಬಕ್ಕ ನಮ್ಮ ನಡುವಿನ ಸೌಹಾರ್ದತೆಯ ಒಗ್ಗಟ್ಟಿನ ಸ್ಫೂರ್ತಿಯ ಸಂಕೇತ ಎಂದು ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ರಾಷ್ಟ್ರೀಯ ಪ್ರತಿಪ್ಠಾನದ ವತಿಯಿಂದ ಹಮ್ಮಿಕೊಂಡ ‘ನಮ್ಮ ಅಬ್ಬಕ್ಕ ಶ್ರಾವಣ ಸಂಭ್ರಮ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಇತಿಹಾಸದ ಬಗ್ಗೆ ತಿಳಿದುಕೊಂಡರೆ ಹೊಸ ಇತಿಹಾಸದ ಸೃಷ್ಟಿ ಸಾಧ್ಯ. ಅಬ್ಬಕ್ಕನ ಚರಿತ್ರೆ ನಮ್ಮ ಯುವಜನಾಂಗಕ್ಕೆ ಸ್ಫೂರ್ತಿ. ಅಬ್ಬಕ್ಕನ ಹೆಸರಿನಲ್ಲಿ ಸದಾನಂದರಿಗೆ ನೀಡಿರುವುದು ಸಮರ್ಪಕವಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.

ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಎಡಪಡಿತ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ವಂ.ಮೆಲ್ವಿನ್ ಪಿಂಟೊ ಮಾತನಾಡಿ, ಅಬ್ಬಕ್ಕನ ಚರಿತ್ರೆ ಕರಾವಳಿ ಕೋಮು ಸೌಹಾರ್ದತೆಯ ಪ್ರತೀಕವಾಗಿದೆ. ಜಾತ್ಯತೀತ ಮೌಲ್ಯ ಈ ದೇಶದ ಜೀವಾಳ ಎಂದು ತಿಳಿಸಿದ್ದಾರೆ.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಮಾತನಾಡಿ, ಪ್ರತಿ ಹಳ್ಳಿಯಿಂದ ಡೆಲ್ಲಿಯವರೆಗೆ ಕಾರ್ಯಕ್ರಮ ನಡೆಯಬೇಕು. ಅಬ್ಬಕ್ಕನ ಹೆಸರಿನಲ್ಲಿ ರಾಷ್ಟ್ರ ಮಟ್ಟದ ಪ್ರತಿವರ್ಷ ಸರಕಾರದ ವತಿಯಿಂದ ನೀಡುವ ಅಗತ್ಯ ವಿದೆ ಎಂದು ಶುಭ ಹಾರೈಸಿದರು. ಪ್ರೊ.ಎ.ವಿ. ನಾವಡ ಮಾತನಾಡಿ, ಮಂಗಳೂರು ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ಹೆಸರು ಮರು ಪರಿಶೀಲನೆ ಅಗತ್ಯವಿದೆ. ಅಬ್ಬಕ್ಕನ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಸಮಾರಂಭವನ್ನು ಊರ್ಮಿಳಾ ರಮೇಶ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕೋಶಾಧಿಕಾರಿ ಪಿ.ಡಿ.ಶೆಟ್ಟಿ ಸ್ವಾಗತಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪ್ರೊ.ಎ.ವಿ. ನಾವಡ, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಪಂ ಸದಸ್ಯೆ ಮಮತಾ ಗಟ್ಟಿ, ಪಟ್ಲ ಸತೀಶ್ ಶೆಟ್ಟಿ, ವಸಂತ ಶೆಟ್ಟಿ ಬೆಳ್ಳಾರೆ, ಉಳಿದೊಟ್ಟು ರವೀಂದ್ರ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ವಿ.ಜಿ.ಪಾಲ್, ಪ್ರದೀಪ್‌ಕುಮಾರ್ ಕಲ್ಕೂರ, ಸಂದೀಪ್ ಶೆಟ್ಟಿ, ಗೀತಾಪ್ರಕಾಶ್, ಡಾ.ಮೆಲ್ವಿನ್ ಪಿಂಟೊ, ಶಿವಾನಂದ ಕರ್ಕೆರಾ, ಹೇಮಂತ ರೈ ಚೆನ್ನೈ, ಪ್ರಸಾದ್ ಕಾಂಚನ್, ಎಸ್.ಎಸ್. ನಾಯಕ್, ಗೋವರ್ಧನ ಶೆಟ್ಟಿ, ಶ್ರೀಮತಿ ಸದಾನಂದ ಶೆಟ್ಟಿ, ತೋನ್ಸೆ ಪುಷ್ಕಳ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News