ದೇಶದ ಮೇಲೆ ಫ್ಯಾಶಿಸ್ಟ್ ದಾಳಿ: ಸಸಿಕಾಂತ್ ಸೆಂಥಿಲ್ ಆತಂಕ

Update: 2019-09-07 16:51 GMT

ಹೊಸದಿಲ್ಲಿ, ಸೆ.7: “ದೇಶದಲ್ಲಿ ತಾರ್ಕಿಕ ಚರ್ಚೆಗೆ ಅವಕಾಶ ಇಲ್ಲ. ಅಂತಹ ಚರ್ಚೆಗಳು ಒಬ್ಬರ ರಾಷ್ಟ್ರೀಯತೆಯ ಪ್ರಶ್ನೆಯಾಗುತ್ತವೆ” ಎಂದು ದಕ್ಷಿಣ ಕನ್ನಡದ ನಿವೃತ್ತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ www.hindustantimes.com ಮತ್ತು www.thenewsminute.com ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

ತಾರ್ಕಿಕ ಚರ್ಚೆಯ ಸ್ಥಾನದಲ್ಲಿ ಅತಿಯಾದ ರಾಷ್ಟ್ರೀಯವಾದವನ್ನು ತುಂಬುವುದು ಫ್ಯಾಶಿಸ್ಟ್ ವಿನ್ಯಾಸದ ಸಿದ್ಧಾಂತದ ಭಾಗದಲ್ಲಿ ಒಂದು. ನೀವು ಚರ್ಚೆ ಆರಂಭಿಸಿದ ಕೂಡಲೇ, ಮೂರನೇ ವಾದ “ನೀವು ರಾಷ್ಟ್ರ ವಿರೋಧಿಗಳೇ?” ಎಂಬುದು. ಇದು ದೇಶದ ಬಗೆಗಿನ ನಿಮ್ಮ ನಿಷ್ಠೆಯ ಬಗ್ಗೆ ಪ್ರಶ್ನೆ ಎತ್ತುತ್ತದೆ. ಇದನ್ನು ಹೆಚ್ಚಿನ ಹಿತಾಸಕ್ತಿಯ ಒಂದು ಭಾಗ ಎಂದು ಜನರ ಮುಂದಿಡದೇ ಇದ್ದರೆ, ಕೆಲವರು ಯಾಕೆ ಚರ್ಚಿಸುತ್ತಿದ್ದಾರೆ ಎಂಬುದು ಅವರಿಗೆ ಅರಿವಾಗದು ಎಂದವರು ಹೇಳಿದ್ದಾರೆ.

ಮಾಧ್ಯಮ, ಫ್ರೀ ಪ್ರೆಸ್ ಹಾಗೂ ಅಧಿಕಾರವರ್ಗ ಈ ಕುರಿತು ಚರ್ಚಿಸುವುದು ಬಹಳ ಮುಖ್ಯ ಎಂದು ಅವರು ಹೇಳಿದರು. ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳ ಸಿದ್ಧಾಂತಗಳಿಂದ ಅಧಿಕಾರಿಗಳನ್ನು ದೂರ ಇರಿಸುವುದುದು ಸಾಧ್ಯವೇ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಸಿಕಾಂತ್, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ನಮ್ಮ ಸಂವಿಧಾನದ ಆಶಯಕ್ಕಿಂತ ಮೇಲಿರಬಾರದು ಎಂದು ಅವರು ಹೇಳಿದರು. ನಮ್ಮ ಸಂವಿಧಾನದಲ್ಲಿರುವ ಮೌಲ್ಯಗಳ ಮೇಲೆ ದೇಶ ನಿರ್ಮಾಣವಾಗಿದೆ. ಸಿದ್ಧಾಂತಗಳಲ್ಲಿ ಭಿನ್ನತೆ ಇರಬಹುದು ಆದರೆ, ಅದು ಸಂವಿಧಾನದ ಆಶಯಗಳಿಂದ ಮೇಲಿರಬಾರದು ಎನ್ನುವುದು ಇದರ ಅರ್ಥವಾಗಿದೆ. ನಾವು ಸಂವಿಧಾನಿಕ ಮೌಲ್ಯಗಳ ಚೌಕಟ್ಟಿನಲ್ಲಿ ನೀತಿಗಳನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರದಲ್ಲಿ ಸಂಭವಿಸುತ್ತಿರುವ ಘಟನಾವಳಿಗಳು ನನ್ನನ್ನು ಹುದ್ದೆಗೆ ರಾಜೀನಾಮೆ ನೀಡುವಂತೆ ಮಾಡಿತು. ಇದು ರಾಜ್ಯಕ್ಕೆ ಸಂಬಂಧಿಸಿರುವುದು ಅಲ್ಲ. ನನ್ನನ್ನು ತೀವ್ರ ಆತಂಕಕ್ಕೆ ಈಡು ಮಾಡಿರುವ, ಸದ್ಯ ರಾಷ್ಟ್ರದ ಮೇಲೆ ಹೇರಲಾದ ಸೈದ್ಧಾಂತಿಕ ರಾಜಕೀಯದ ಒಟ್ಟು ವಿನ್ಯಾಸಕ್ಕೆ ಸಂಬಂಧಿಸಿದ್ದು. ವಿಧಿ 370ನ್ನು ರದ್ದುಗೊಳಿಸಿದಾಗ ಇದು ಪರಾಕಾಷ್ಟೆಗೆ ತಲುಪಿತು ಎಂಬುದು ನನ್ನ ಭಾವನೆ.

ನಾನು ರಾಜಕೀಯ ಸಿದ್ಧಾಂತಗಳು ಹಾಗೂ ನಡೆಗಳನ್ನು ಯಾವಾಗಲೂ ಗಮನಿಸುತ್ತಿರುತ್ತೇನೆ. ನನ್ನ ಅಭಿಪ್ರಾಯದ ಪ್ರಕಾರ ಇದು ಸ್ಪಷ್ಟವಾಗಿ ಫ್ಯಾಶಿಸ್ಟ್ ದಾಳಿ. ಜನರು ಅತಿಯಾದ ರಾಷ್ಟ್ರೀಯವಾದಿಗಳಾಗಿದ್ದಾರೆ. ಬೌದ್ಧಿಕ ಚರ್ಚೆಗೆ ಜನರು ಪ್ರೇರಣೆ ನೀಡಲು ಸಾಧ್ಯವಿಲ್ಲ. ನಾನು ಅಧಿಕಾರಿ ಸ್ಥಾನದಲ್ಲಿ ಕುಳಿತುಕೊಂಡು ಇದನ್ನೆಲ್ಲ ವೀಕ್ಷಿಸಲು ಸಾಧ್ಯವಿಲ್ಲ. ನಾನು ಅದರ ಬಗ್ಗೆ ಏನನ್ನಾದರೂ ಮಾಡಬೇಕಾದರೆ, ಸೇವೆಯಿಂದ ಹೊರಬರಬೇಕು. ಅದಕ್ಕೆ ನಾನು ರಾಜೀನಾಮೆ ನೀಡಿದೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News