ಚಂದ್ರಯಾನ-2 ಮಿಷನ್: ಅಮೆರಿಕ ಹೇಳಿದ್ದೇನು?

Update: 2019-09-08 08:13 GMT

ಹೊಸದಿಲ್ಲಿ: ಚಂದ್ರಯಾನ -2 ಮಿಷನ್ ಭಾರತಕ್ಕೆ ದೊಡ್ಡ ಮುನ್ನಡೆ ದೊರಕಿಸಿಕೊಟ್ಟಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ. ಭಾರತ ವೈಜ್ಞಾನಿಕ ಅಭಿವೃದ್ಧಿಗೆ ಪೂರಕವಾಗುವ ಮೌಲಿಕ ದತ್ತಾಂಶಗಳನ್ನು ಉತ್ಪಾದಿಸುವಲ್ಲಿ ಭಾರತ ಯಶಸ್ವಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಚಂದ್ರನ ಮೇಲೆ ಇಳಿಯುವ ಭಾರತದ ಪ್ರಯತ್ನ ಅಲ್ಪ ಅಂತರದಲ್ಲಿ ವಿಫಲವಾದ ಬಗ್ಗೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

"ಚಂದ್ರಯಾನ-2 ಮಿಷನ್‍ನಲ್ಲಿ ನಂಬಲಸಾಧ್ಯ ಪ್ರಯತ್ನಗಳನ್ನು ಮಾಡಿರುವ ಬಗ್ಗೆ ನಾವು ಇಸ್ರೋಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಇದು ಭಾರತಕ್ಕೆ ದೊಡ್ಡ ಮುನ್ನಡೆ" ಎಂದು ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಹಂಗಾಮಿ ಸಹಾಯಕ ಕಾರ್ಯದರ್ಶಿ ಅಲಿಸ್ ಜಿ.ವೇಲ್ಸ್ ಟ್ವೀಟ್ ಮಾಡಿದ್ದಾರೆ.

"ಭಾರತ ತನ್ನ ಬಾಹ್ಯಾಕಾಶ ಆಕಾಂಕ್ಷೆಗಳನ್ನು ಸಾಧಿಸುತ್ತದೆ ಎನ್ನುವುದು ನಿಸ್ಸಂದೇಹ" ಎಂದು ಸ್ಪಷ್ಟಪಡಿಸಿದೆ.

ಅಮೆರಿಕದ ನಾಸಾ ಟ್ವೀಟ್ ಮಾಡಿದ್ದು, ಇದನ್ನು ಇಸ್ರೋಗೆ ಟ್ಯಾಗ್ ಮಾಡಿ, ಚಂದ್ರನ ಮೇಲೆ ಇಳಿಯುವ ಪ್ರಯತ್ನವನ್ನು ಶ್ಲಾಘಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News