ಯುಎಫ್ ಸಿ: ಡಸ್ಟಿನ್ ಗೆ ಸೋಲುಣಿಸಿದ ಅಜೇಯ ಖಬೀಬ್

Update: 2019-09-08 10:17 GMT

ಯಾಸ್ ಐಲ್ಯಾಂಡ್ , ಸೆ.7: ಯುಎಫ್‌ಸಿ 242 ಲೈಟ್ ವೇಟ್ ಕಾದಾಟದಲ್ಲಿ ರಶ್ಯದ ಬಾಕ್ಸರ್ ಖಬೀಬ್ ನೂರ್ಮಾಗೋಮಾಡೋವ್ ಅವರು ಡಸ್ಟಿನ್ ಪೊಯಿಯರ್‌ ಅವರನ್ನು ಬಗ್ಗು ಬಡಿದು ಪ್ರಶಸ್ತಿ ಎತ್ತುವ ಮೂಲಕ ತನ್ನ ಅಜೇಯ ದಾಖಲೆಯನ್ನು ಮುಂದುವರಿಸಿದ್ದಾರೆ. 

ಅಕ್ಟೋಬರ್ 2018 ರಲ್ಲಿ ಕಾನರ್ ಮೆಕ್‌ಗ್ರೆಗೊರ್ ಅವರನ್ನು ಸೋಲಿಸಿಸುವ ಬಾಕ್ಸಿಂಗ್ ನ ಜಾಗತಿಕ ಸ್ಟಾರ್ ಆಗಿ ಗಮನ ಸೆಳೆದಿದ್ದರು. ಇದೀಗ ಅಬುಧಾಬಿ ಯಾಸ್‍ ಐಲ್ಯಾಂಡ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಖಬೀಬ್ ಅವರು ಡಸ್ಟಿನ್ ಪೊಯಿಯರ್ ಗೆ ಸೋಲುಣಿಸಿದರು.

"ಇತ್ತೀಚೆಗೆ ನನ್ನ ಮೇಲೆ ಸಾಕಷ್ಟು ಒತ್ತಡವಿದೆ, ನನಗೆ ಈಗ ಒಂದೆರಡು ದಿನಗಳ ವಿಶ್ರಾಂತಿ ಬೇಕು" ಎಂದು ಖಬೀಬ್ ಹೇಳಿದರು.

ಯುಎಫ್‌ಸಿ ಅಧ್ಯಕ್ಷ ಡಾನಾ ವೈಟ್ ಅವರು ಖಬೀಬ್ ಅವರ ಮುಂದಿನ ಹೋರಾಟವು ಟೋನಿ ಫರ್ಗುಸನ್ ವಿರುದ್ಧದ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಖಬೀಬ್ ಈ ಮೊದಲು 12 ಯುಎಫ್‌ಸಿ ಪಂದ್ಯಗಳನ್ನು ಗೆದ್ದಿದ್ದಾರೆ. ಇದರೊಂದಿಗೆ ಆಂಡರ್ಸನ್ ಸಿಲ್ವಾ ದಾಖಲೆಯನ್ನು ಮುರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News