×
Ad

ಅಲ್ಲಿಪಾದೆ ಚರ್ಚ್: ವಿಜೃಂಭಣೆಯ ತೆನೆ ಹಬ್ಬ ಆಚರಣೆ

Update: 2019-09-08 18:08 IST

ಬಂಟ್ವಾಳ, ಸೆ. 8: ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಸಂತ ಅಂತೋನಿ ಚರ್ಚ್‍ನಲ್ಲಿ ರವಿವಾರ ತೆನೆ ಹಬ್ಬವನ್ನು  ವಿಜೃಂಭಣೆಯಿಂದ ಆಚರಿಸಲಾಯಿತು.

ಅಲ್ಲಿಪಾದೆ ಚರ್ಚ್ ಧರ್ಮಗುರು ಫಾ. ಫ್ರೆಡ್ರಿಕ್ ಮೊಂತೆರೋ ಅವರ ನೇತೃತ್ವದಲ್ಲಿ ಭಕ್ತರು ಬಲಿ ಪೂಜೆ ಅರ್ಪಿಸಿದರು. ಕಂಕನಾಡಿ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಫಾ. ಅಜಿತ್ ಮಿನೇಜಸ್‍ಅವರು ಆಶೀರ್ವಚನ ನೀಡಿದರು. 

ಈ ಸಂದರ್ಭದಲ್ಲಿ ಚರ್ಚ್ ಪಾಲನ ಮಂಡಳಿ ಸಮಿತಿ, ವೈ.ಸಿ.ಎಸ್., ಮತ್ತು ಐ.ಸಿ.ವೈ.ಯಂ.ನ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದರು. ಚರ್ಚ್‍ನಿಂದ ಅಲ್ಲಿಪಾದೆಯ ಪೇಟೆಯಲ್ಲಿ ಮಾತೆ ಮರಿಯಮ್ಮ ಅವರ ಮೂರ್ತಿಯನ್ನು ಪುಷ್ಪಾರ್ಚನೆಯೊಂದಿಗೆ ಮೆರವಣಿಗೆ ನಡೆಸಲಾಯಿತು.

ಬಲಿಪೂಜೆಯ ಬಳಿಕ ಪರಿಸರದ ಸಾರ್ವಜನಿಕರ ಸಹಿತ ಕ್ರೈಸ್ತ ಬಾಂಧವರಿಗೆ ಕಬ್ಬು ಮತ್ತು ತೆನೆಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಲಿಯೋ ಫೆರ್ನಾಂಡಿಸ್, ಕಾರ್ಯದರ್ಶಿ ಮಡ್ತಿನಿ ಸಿಕ್ವೇರ, ಕ್ಲೂನಿ ಕಾನ್ವೆಂಟ್‍ನ ಧರ್ಮ ಭಗಿನಿಯರು, ವೈ.ಸಿ.ಎಸ್., ಮತ್ತು ಐ.ಸಿ.ವೈ.ಯಂ.ನ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News