×
Ad

ಲೊರೆಟ್ಟೋ ಚರ್ಚ್‍ನಲ್ಲಿ ತೆನೆಹಬ್ಬ ಆಚರಣೆ

Update: 2019-09-08 18:09 IST

ಬಂಟ್ವಾಳ, ಸೆ. 8: ಲೊರೆಟ್ಟೋ ಮಾತಾ ಚರ್ಚ್‍ನಲ್ಲಿ ರವಿವಾರ ತೆನೆಹಬ್ಬವನ್ನು ಭಕ್ತಿಯಿಂದ ಆಚರಿಸಲಾಯಿತು.

ಲೋರೆಟ್ಟೋ ಪದವಿನಲ್ಲಿನಲ್ಲಿ ಪ್ರಾರ್ಥನಾ ವಿಧಿಯೊಂದಿಗೆ ಆರಂಭವಾದ ಆಚರಣೆ, ಕನ್ಯೆ ಮರಿಯಮ್ಮ ಮೂರ್ತಿಯನ್ನು ಪಟಾಕಿ, ಬ್ಯಾಂಡ್‍ಗಳೊಂದಿಗೆ ಮೆರವಣಿಗೆ ಮೂಲಕ ಚರ್ಚ್‍ಗೆ ತರಲಾಯಿತು. ಈ ಸಂದರ್ಭ ಮಕ್ಕಳು ಹೂಗಳನ್ನು ಅರ್ಪಿಸಿದರು. ಬಳಿಕ ಬಲಿಪೂಜೆ ನಡೆಯಿತು.

ಪ್ರಧಾನ ಧರ್ಮಗುರುಗಳಾಗಿ ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ರೋಕ್ವಿನ್ ಪಿಂಟೋ ಅವರು, ಮರಿಯಮ್ಮ ಜನ್ಮದಿನದ ಸಂದೇಶ ನೀಡಿದರು. ಅವರೊಂದಿಗೆ ದಿಲ್ರಾಜ್ ಹಾಗೂ ಲೋರೆಟ್ಟೋ ಚರ್ಚ್ ಧರ್ಮ ಗುರುಗಳಾದ ಎಲಿಯಸ್ ಡಿಸೋಜಾ ಸೇರಿದ್ದ ಭಕ್ತರೊಂದಿಗೆ ಬಲಿ ಪೂಜೆಯನ್ನು ಅರ್ಪಿಸಿದರು.

ಬಳಿಕ ಭಕ್ತರಿಗೆ ತೇನೆಯನ್ನು ವಿತರಿಸಲಾಯಿತು. ಚರ್ಚ್ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾಹನಗಳನ್ನು ಮೈದಾನದಲ್ಲಿ ಸಾಲಾಗಿ ನಿಲ್ಲಿಸಿ ಆಶಿರ್ವಚಿಸಲಾಯಿತು.

ಬಳಿಕ ಸೇರಿದ್ದವರಿಗೆ ಉಪಹಾರ ಹಾಗೂ ಕಬ್ಬು ವಿತರಿಸಲಾಯಿತು. ಕ್ಯಾಥೋಲಿಕ್ ಸಭಾ ಲೊರೆಟ್ಟೋ ಘಟಕದ ವತಿಯಿದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮಗಳನ್ನು ಚರ್ಚ್‍ನ ವಾಹನ ಚಾಲಕ - ಮಾಲಕ ಸಂಘ, ಚರ್ಚ್ ಪಾಲನಾ ಮಂಡಳಿ ಆಯೋಜಿಸಿತ್ತು. ಮರಿಯಮ್ಮ ಮೂರ್ತಿಯನ್ನು ಹಾಗೂ ಚರ್ಚ್ ಹೂವುಗಳಿಂದ ಅಲಂಕರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News