ಬೆಳ್ತಂಗಡಿ ತಾಲೂಕಿನಲ್ಲಿ ಸಂಭ್ರಮದ ಮೋಂತಿ ಫೆಸ್ಟ್

Update: 2019-09-08 14:32 GMT

ಬೆಳ್ತಂಗಡಿ: ತಾಲೂಕಿನಾದ್ಯಂತ ಕ್ರೈಸ್ತರ ಪವಿತ್ರ ಹಬ್ಬ ಮೊಂತಿ ಫೆಸ್ಟ್ (ಕನ್ಯಾಮರಿಯಮ್ಮನವರ ಜನ್ಮದಿನ) ವನ್ನು ಸಂಭ್ರಮದಿಂದ ಆಚರಿಸಿದರು. ಬೆಳ್ತಂಗಡಿಯ ಸಂತ ಲಾರೆನ್ಸ್ ಕಧೀಡ್ರಲ್ ಚರ್ಚಿನಲ್ಲಿ  ಸಂಭ್ರಮದಿಂದ ಆಚರಣೆಗಳು ನಡೆಯಿತು. ತಾಲೂಕಿನ ವಿವಿಧ ಚರ್ಚ್‍ಗಳಲ್ಲಿ ಕ್ರೈಸ್ತರು ಭಕ್ತಿಯಿಂದ ಹಬ್ಬದಲ್ಲಿ ಪಾಲ್ಗೊಂಡರು.

ಬೆಳ್ತಂಗಡಿಯ ಚರ್ಚ್‍ರೋಡ್ ವೃತ್ತದಿಂದ ಬೆಳಗ್ಗೆ 8.30ಕ್ಕೆ ಕನ್ಯಾಮೇರಿಯಮ್ಮ ಅವರ ಮೂರ್ತಿಯನ್ನು ಪುಷ್ಪ ವೃಷ್ಟಿಗೊಳಿಸುವ ಮೂಲಕ ಮೆರವಣಿಗೆ ಮೂಲಕ ತಾಲೂಕಿನ ಪ್ರಧಾನ ದೇವಾಲಯವಾದ ಹೋಲಿ ರಿಡೀಮರ್ ಚರ್ಚ್‍ಗೆ ಕರೆದೊಯ್ಯಲಾಯಿತು. 9.30ಕ್ಕೆ ಧರ್ಮಗುರುಗಳು ವಿಶೇಷ ಬಲಿ ಪೂಜೆ ನೆರವೇರಿಸಿದರು.

ಮಂಗಳೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ಮ್ಯಾಕ್ಸಿಂ ರೊಸಾರಿಯೊ ಆಶೀರ್ವಚನದ ಮೂಲಕ ಸಂದೇಶ ಸಾರಿದರು. ಈ ವೇಳೆ ಬೆಳ್ತಂಗಡಿ ಪ್ರಧಾನ ದೇವಾಲಯದ ಧರ್ಮಗುರುಗಳಾದ ಬೊನವಿಂಚರ್ ನಝರತ್, ಫಾ. ಅರುಣ್ ಲೋಬೊ, ಹೋಲಿ ರೆಡಿಮರ್ ಶಾಲೆಯ ಪ್ರಿನ್ಸಿಪಾಲ್ ಫಾ. ಜೈಸನ್ ವಿ.ಮೋನಿಸ್ ಉಪಸ್ಥಿತರಿದ್ದರು.

ಮಡಂತ್ಯಾರು ಸೇಕೆಡ್ ಹಾರ್ಟ್ ಚರ್ಚ್‍ನಲ್ಲಿ ಸಂಭ್ರಮ

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‍ನಲ್ಲಿ ತೆನೆ ಹಬ್ಬ ಆಚರಿಸಲಾಯಿತು. ಚರ್ಚ್ ಸಹಾಯಕ ಧರ್ಮಗುರು ಫಾ. ಸ್ಟ್ಯಾನಿ ಪಿಂಟೋ ಆಶೀರ್ವಚನ ನೀಡಿ, ಬಲಿ ಪೂಜೆ ನೆರವೇರಿಸಿದರು. ಚರ್ಚ್ ಪ್ರಧಾನ ಧರ್ಮಗುರು ಫಾ. ಬೆಸಿಲ್ ವಾಸ್, ಫಾ. ಜೋಸೆಫ್ ಡಿಸೋಜ, ಫಾ. ಲ್ಯಾನ್ಸಿ  ಲೂಯಿಸ್, ಫಾ. ಜರಂ ಡಿಸೋಜ, ಫಾ. ಮೆಲ್ವಿನ್ ನೊರೆನ್ಹೊ, ಬ್ರದರ್ ರೊನಾಲ್ಡ್ ಫೆರಾವೊ ಸಂದೇಶ ನೀಡಿದರು.

ಇದಕ್ಕೂ ಮುನ್ನ ಮಂಡತ್ಯಾರು ಪೇಟೆ ಸಮೀಪ ವೆಲಂಕಣಿ ಮಾತೆ ವೃತ್ತದಿಂದ ಚರ್ಚ್ ವರೆಗೆ ಚರ್ಚ್‍ಗೆ ಭಕ್ತರು ಪವಿತ್ರ ಮೆರವಣಿಗೆಯಲ್ಲಿ ಸಾಗಿಬಂದರು. ಈ ಬಾರಿ ಪರಮ ಪ್ರಸಾದ ಸ್ವೀಕರಿಸಿದ 28 ಮಕ್ಕಳು ಬಿಳಿ ಸಮವಸ್ತ್ರ ಧರಿಸಿ ಬಗೆಬಗೆಯ ಹೂ ಹಿಡಿದು ಸಾಗುವ ಮೂಲಕ ವಿಶೇಷ ಆಕರ್ಷಣೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News