ಮೂಡುಶೆಡ್ಡೆಯ ಮಹಿಳೆ ನಾಪತ್ತೆ

Update: 2019-09-08 15:29 GMT

ಮಂಗಳೂರು, ಸೆ.8: ಮಹಿಳೆಯೋರ್ವರು ಮನೆಯಿಂದ ನಾಪತ್ತೆಯಾದ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡುಶೆಡ್ಡೆಯ ನಿವಾಸಿ ಜಯಮ್ಮ (43) ನಾಪತ್ತೆಯಾದ ಮಹಿಳೆ.

ಪತಿ ಬಸವರಾಜ್ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಪತ್ನಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರಿಂದ ಮನೆಯಲ್ಲಿ ಇರುತ್ತಿದ್ದರು. ಆ.20ರಂದು ಬೆಳಗ್ಗೆ ಕೆಲಸಕ್ಕೆ ತೆರಳಿದ ಬಸವರಾಜ್ ಸಂಜೆ ಮನೆಗೆ ವಾಪಸಾದಾಗ ಪತ್ನಿ ಕಾಣೆಯಾಗಿದ್ದಾರೆ. ನೆರೆ-ಹೊರೆ ಹಾಗೂ ಸಂಬಂಧಿ ಕರಲ್ಲಿ ವಿಚಾರಿಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ತಡವಾಗಿ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News