ಉಳ್ಳಾಲ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಕ್ರೀಡಾಕೂಟ

Update: 2019-09-08 15:36 GMT

ಉಳ್ಳಾಲ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ವಲಯ ವತಿಯಿಂದ ಏರಿಯಾ ಮಟ್ಟದ ಕ್ರೀಡಾಕೂಟವು ಉಳ್ಳಾಲದ ಬೀಚ್ ನಲ್ಲಿ  ರವಿವಾರ ನಡೆಯಿತು.

ಉಳ್ಳಾಲ ಏರಿಯಾದ ಕಾರ್ಯಕರ್ತರೊಂದಿಗೆ ಹಲವು ಸ್ಥಳೀಯರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಈ ಕ್ರೀಡಾಕೂಟದಲ್ಲಿ ಆಕರ್ಷಕ ಆಟೋಟಗಳನ್ನು ಏರ್ಪಡಿಸಲಾಗಿತ್ತು.

ಫಯಾಝ್ ಕೈಕೊ ನೇತೃತ್ವದ ತಂಡ ವಿಜಯಿಯಾಯಿತು. ಸಿದ್ದೀಕ್ ಕುಂಪಲರವರು ಕ್ರೀಡೆಯಲ್ಲಿ ಯುವಕರ ಪಾತ್ರದ ಕುರಿತು ವಿವರಿಸಿದರು.  ಸಿದ್ದೀಕ್ ಯು.ಬಿ, ಶಹೀದ್ ಕಿನ್ಯಾ, ಜಮಾಲ್ ಮುಕ್ಕಚೇರಿ ಕ್ರೀಡಾಕೂಟದಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News