ನ್ಯೂಯಾರ್ಕ್‌ನ ವಿಶ್ವಪ್ರಸಿದ್ಧ ಗೂಳಿ ಪ್ರತಿಮೆಗೆ ಕಿಡಿಗೇಡಿಯಿಂದ ಹಾನಿ

Update: 2019-09-08 17:15 GMT

 ನ್ಯೂಯಾರ್ಕ್,ಸೆ.8: ಇಲ್ಲಿನ ವಿಶ್ವಪ್ರಸಿದ್ಧ ‘ಆಕ್ರಮಣಕಾರಿ ಗೂಳಿ’ಯ  ಪ್ರತಿಮೆಯನ್ನು ಕಿಡಿಗೇಡಿಯೊಬ್ಬ ಹಾನಿಗೊಳಿಸಿದ್ದು, ಅದರ ಒಂದು ಕೋಡು ಭಗ್ನಗೊಂಡಿದೆ.

ಗೂಳಿಯ ಪ್ರತಿಮೆಗೆ ಹಾನಿಯೆಸಗಿದ ಆರೋಪಿಯನ್ನು ಡಲ್ಲಾಸ್ ನಗರದ ಟೆವೊನ್ ವಾರ್ಲಾಕ್ ಎಂದು ಗುರುತಿಸಲಾಗಿದೆ. ಆತನ ಕ್ರಿಮಿನಲ್‌ಕಿಡಿಗೇಡಿತನ, ಅಶಿಸ್ತಿನ ವರ್ತನೆ ಹಾಗೂ ಆಯುಧವನ್ನು ಹೊಂದಿರುವ ಆರೋಪಗಳನ್ನು ಹೊರಿಸಲಾಗಿದೆ.

42 ವರ್ಷ ವಯಸ್ಸಿನ ವಾರ್ಲಾಕ್ ಗೂಳಿಯ ಪ್ರತಿಮೆಗೆ ಲೋಹದ ಸಾಧನವೊಂದರಿಂದ ಹೊಡೆದಿದ್ದಾನೆ. ಈ ದಾಳಿಯಿಂದಾಗಿ, ಪ್ರತಿಮೆಯ ಬಲಭಾಗದ ಕೋಡಿನಲ್ಲಿ ರಂಧ್ರವೊಂದು ಉಂಟಾಗಿದೆ.

  7100 ಪೌಂಡ್ ಭಾರದ ಈ ಪ್ರತಿಮೆಯನ್ನು ಇಟಲಿಯ ಕಲಾವಿದ ಆರ್ಟುರೊ ಡಿ ಮೊಡಿಕಾ 1989ರಲ್ಲಿ ರಚಿಸಿದ್ದರು ಹಾಗೂ ಅದನ್ನು ನ್ಯೂಯಾರ್ಕ್‌ನ ಮ್ಯಾನ್ ಹಟ್ಟನ್ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು ಹಾಗೂ ಭಾರೀ ಜನಾಕರ್ಷಣೆಯನ್ನು ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News