ಸಿಖ್ ವಿರೋಧಿ ಗಲಭೆಯ ಮರುತನಿಖೆಗೆ ಗೃಹ ಸಚಿವಾಲಯ ಗ್ರೀನ್ ಸಿಗ್ನಲ್: ಕಾಂಗ್ರೆಸ್ ನಾಯಕ ಕಮಲ್ ನಾಥ್ ಗೆ ಸಂಕಷ್ಟ

Update: 2019-09-09 15:42 GMT

ಹೊಸದಿಲ್ಲಿ, ಸೆ.9: 1984ರ ಸಿಖ್ ವಿರೋಧಿ ಗಲಭೆಯ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರ ಹೆಸರಿರುವ ಪ್ರಕರಣವೊಂದನ್ನು ಶೀಘ್ರ ಮರುತನಿಖೆ ನಡೆಸಲು ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಕಾಂಗ್ರೆಸ್ ನ ಮತ್ತೊಬ್ಬ ನಾಯಕನಿಗೆ ಸಂಕಷ್ಟ ಎದುರಾಗಿದೆ.

ಆಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದಲ್ಲಿ ಕಮಲ್ ನಾಥ್ ಸಂಬಂಧಿ ರಾತುಲ್ ಪುರಿ ಬಂಧನದ ಕೆಲ ದಿನಗಳ ನಂತರ ಸಚಿವಾಲಯ ಈ ನಿರ್ಧಾರಕ್ಕೆ ಮುಂದಾಗಿದೆ. ಕಳೆದ ತಿಂಗಳು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು.

ಸಿಖ್ ವಿರೋಧಿ ಗಲಭೆಯಲ್ಲಿ ತನ್ನ ಪಾತ್ರ ಇಲ್ಲ ಎಂದು ಕಮಲ್ ನಾಥ್ ಹೇಳುತ್ತಲೇ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News