ಜಿ.ಟಿ.ದೇವೆಗೌಡ ಸಹಿತ ಹಲವು ಹಿರಿಯರು ಬಿಜೆಪಿ ಬಗ್ಗೆ ಒಲವು: ಕೋಟ
ಉಡುಪಿ, ಸೆ.10: ಬಿಜೆಪಿಯಿಂದ ಸಮೃದ್ಧ, ವ್ಯವಸ್ಥಿತ ಆಡಳಿತ ನಡೆಸಲಾಗು ತ್ತಿದೆ ಎಂಬ ಭಾವನೆ ಜಿ.ಟಿ.ದೇವೆಗೌಡ ಮಾತ್ರವಲ್ಲದೆ ಅನೇಕರಿಗೆ ಬಂದಿದೆ. ಹಲವು ಮಂದಿ ಹಿರಿಯರು ಬಿಜೆಪಿ ಕಡೆ ವಾಲುತ್ತಿದ್ದಾರೆ. ಪಕ್ಷ ಇದನ್ನು ಗಮನಿ ಸುತ್ತಿದೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಶುಭದಿನ ಆಗುವ ವಾತಾವರಣ ಹೆಚ್ಚಾಗಲಿದೆ ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರ ಪ್ರವಾಹವನ್ನು ಎದುರಿಸುವಲ್ಲಿ ಯಶಸ್ವಿಯಾಗಿದೆ. ಕೇಂದ್ರ ನೆರೆ ಪರಿಹಾರಕ್ಕೆ ಸಂಬಂಧಿಸಿ ಸಮೀಕ್ಷೆ ಮಾಡಿ ಹೋಗಿದೆ. ಹಣ ಬಿಡುಗಡೆ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿ ದ್ದಾರೆ. ಸದ್ಯವೇ ಅಚ್ಚರಿ ಹಾಗೂ ಖುಷಿ ಪಡುವ ಮೊತ್ತ ರಾಜ್ಯಕ್ಕೆ ಬಿಡುಗಡೆ ಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ಬೆಳಗಾವಿ ಪ್ರವಾಹ ಸಭೆಯಲ್ಲಿ ದುಂದುವೆಚ್ಚದ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಟೀ, ತಿಂಡಿ ಕೊಟ್ಟರೆ ಬಾರಿ ದೊಡ್ಡ ಅಪರಾಧ ಆಗುವುದಿಲ್ಲ. ಸಭೆಯಲ್ಲಿ ಯಾವುದೇ ದುಂದುವೆಚ್ಚ ಆಗಿಲ್ಲ. ಮನೆ ಕಳೆದು ಕೊಂಡವರಿಗೆ ಈವರೆಗೆ 5 ಲಕ್ಷ ಕೊಟ್ಟ ಉದಾಹರಣೆ ಇಲ್ಲ. ಯಾವುದೇ ಸರಕಾರ ಒಂದು ಲಕ್ಷಕ್ಕಿಂತ ಹೆಚ್ಚು ಪರಿಹಾರ ಹಣ ಕೊಟ್ಟಿಲ್ಲ ಎಂದು ತಿಳಿಸಿದರು.
ಸರಕಾರ ಬೀಳುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರಕಾರ ಬೀಳುತ್ತದೆ ಎಂದು ಕನಸು ಕಾಣುವುದು ಅವರವರ ವಿವೇಚನೆಗೆ ಬಿಟ್ಟದ್ದು. ಬಿಜೆಪಿ ಮೂರುವರೆ ವರ್ಷಗಳ ಸಮೃದ್ಧವಾದ ಆಡಳಿತ ನಡೆಸಲಿದೆ. ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತದಲ್ಲಿ ಗೆಲ್ಲುತ್ತೇವೆ. ಸಿದ್ದರಾಮಯ್ಯನವರಿಗೆ ಒಳ್ಳೆಯದೆಲ್ಲ ಕೆಟ್ಟದ್ದಾಗಿ ಕಾಣುತ್ತದೆ. ಮುಂದಿನ ಚುನಾ ವಣೆಯಲ್ಲಿ ಅವರ ಪಕ್ಷ ಸಂಪೂರ್ಣ ಸೋಲು ಕಾಣಲಿದೆ ಎಂದು ಹೇಳಿದರು.