ಸಮಕಾಲೀನ ಸಮಸ್ಯೆಗಳಿಗೆ ಮುಸ್ಲಿಂ ಜಮಾಅತ್ ಧ್ವನಿಯಾಗಲಿ: ಶಾಫಿ ಸಅದಿ
ಉಡುಪಿ, ಸೆ.10: ಒಗ್ಗಟ್ಟಾಗಿ ತಮ್ಮ ಬೇಡಿಕೆಗಳನ್ನು ಗಟ್ಟಿ ಧ್ವನಿಯಲ್ಲಿ ಕೇಳಿ ಕೊಳ್ಳಬೇಕಾದ ಕಾಲಘಟ್ಟದಲ್ಲಿ ಮುಸ್ಲಿಮ್ ಸಮುದಾಯ ಇದೆ. ಗಟ್ಟಿ ಧ್ವನಿ ಇಲ್ಲದಿದ್ದರೆ ನಮ್ಮ ಯಾವುದೇ ಬೇಡಿಕೆಗಳು ಕೂಡ ಈಡೇರುವುದಿಲ್ಲ. ಆದು ದರಿಂದ ಮುಸ್ಲಿಮ್ ಸಮುದಾಯ ಇಂದು ತನ್ನ ಶಕ್ತಿ ಆರ್ಜಿಸಿಕೊಳ್ಳಬೇಕಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಎನ್.ಕೆ. ಎಂ.ಶಾಫಿ ಸಅದಿ ಬೆಂಗಳೂರು ಹೇಳಿದ್ದಾರೆ.
ಉದ್ಯಾವರ ಬಲಾಯಿಪಾದೆಯ ನಿತ್ಯಾನಂದ ಆರ್ಕೇಡ್ ಸಭಾಂಗಣದಲ್ಲಿ ರವಿವಾರ ನಡೆದ ಕರ್ನಾಟಕ ಮುಸ್ಲಿಂ ಜಅಮಾತ್ ಉಡುಪಿ ಜಿಲ್ಲಾ ಸಮಿತಿಯ ಪದಗ್ರಹಣ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಅಮಾತ್ ಸಮುದಾಯದ ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಉದ್ಯೋಗ, ಆಡಳಿತಾತ್ಮಕ, ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅನೇಕ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
ಮುಸ್ಲಿಂ ಜಮಾಅತ್ ರಾಜ್ಯ ಸಂಚಾಲಕ ಅಬ್ದುಲ್ ಹಮೀದ್ ಬಜ್ಪೆ ಮಾತನಾಡಿ, ಮುಸ್ಲಿಮರ ಜೀವನದಲ್ಲಿ ಮೊಹಲ್ಲಾಗಳು ನಿರ್ವಹಿಸುವ ಪಾತ್ರ ಮುಖ್ಯವಾದುದು. ಈ ನಿಟ್ಟಿನಲ್ಲಿ ಎಲ್ಲ ಮೊಹಲ್ಲಾಗಳನ್ನು ಒಟ್ಟುಗೂಡಿಸುವ ‘ಸಮಗ್ರ ಮೊಹಲ್ಲಾ ಯೋಜನೆ’ ಮುಸ್ಲಿಮ್ ಜಮಾಅತ್‌ನ ಮುಂದಿದೆ. ಮೊಹಲ್ಲಾದ ಮೂಲಕ ಪ್ರತಿಯೊಬ್ಬರ ಅಭಿವೃದಿ ಈ ಯೋಜನೆಯ ಗುರಿ ಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಡಾ.ಮೌಲಾನಾ ನಝೀರ್ ಅಝ್ಹರಿ ಉದ್ಘಾಟಿಸಿದರು. ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ.ಅಬೂಬಕ್ಕರ್ ನೇಜಾರು, ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯಾ ಧ್ಯಕ್ಷ ಹಾಜಿ ಎಂ.ಎಸ್.ರಝಾಕ್, ಇಹ್ಸಾನ್ ಕರ್ನಾಟಕ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಹಂಝತ್ ಕೋಡಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಬೀರ್ ಸಖಾಫಿ, ಎಸ್‌ಎಂಎ ಜಿಲ್ಲಾಧ್ಯಕ್ಷ ಮನ್ಸೂರು ಕೋಡಿ, ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಹಾಜಿ ಕೆ.ಮೊಯ್ದಿನ್ ಗುಡ್‌ವಿಲ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಕೆ.ಪಿ.ಇಬ್ರಾಹಿಮ್ ಮಟಪಾಡಿ. ಎಸ್‌ಡಿಐ ಜಿಲ್ಲಾಧ್ಯಕ್ಷ ಸಯ್ಯಿದ್ ಫರೀದ್ ಉಡುಪಿ, ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಅಬ್ದುರ್ರವೂಫ್ ಖಾನ್ ಕುಂದಾಪುರ, ರಾಜ್ಯ ಕಾರ್ಯ ದರ್ಶಿ ಅಶ್ರಫ್ ಅಂಜದಿ, ಸುನ್ನಿ ಸೆಂಟರ್ ಕೋಶಾಧಿಕಾರಿ ಎಂಎಚ್‌ಬಿ ಮುಹಮ್ಮದ್ ಮೂಳೂರು ಮೊದಲಾದವರು ಹಾಜರಿದ್ದರು.
ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಸ್ವಾಗತಿಸಿದರು. ಸುಬಾನ್ ಅಹ್ಮದ್ ವಂದಿಸಿದರು. ಅಡ್ವಕೆಟ್ ಇಲ್ಯಾಸ್ ಕಾರ್ಯಕ್ರಮ ನಿರೂಪಿಸಿದರು.