ಹಾವು ಕಚ್ಚಿ ಮಹಿಳೆ ಮೃತ್ಯು

Update: 2019-09-10 16:12 GMT

ಮಂಗಳೂರು, ಸೆ.10: ವಿಷಪೂರಿತ ಹಾವೊಂದು ಕಚ್ಚಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಕಿಲೆಂಜಾರು ಎರ್ಮಾಳು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ತಾಲೂಕಿನ ಕಿಲೆಂಜಾರು ಎರ್ಮಾಳು ನಿವಾಸಿ ದೇವಿ (40) ಮೃತ ಮಹಿಳೆ.

ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರು ತನ್ನದೇ ತೋಟದಲ್ಲಿ ಹುಲ್ಲು ಕೀಳುತ್ತಿದ್ದ ಮಹಿಳೆಗೆ ವಿಷಪೂರಿತ ಹಾವೊಂದು ಕಚ್ಚಿದೆ. ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News