×
Ad

ಮಂಗಳೂರು: ಸಂಚಾರ ಉಲ್ಲಂಘನೆಯ 1,635 ಪ್ರಕರಣ ದಾಖಲು; 3.92 ಲಕ್ಷ ರೂ. ದಂಡ ವಿಧಿಸಿದ ಪೊಲೀಸರು

Update: 2019-09-10 21:57 IST

ಮಂಗಳೂರು, ಸೆ.10: ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರು ಮೂರು ದಿನದಲ್ಲಿ 1,635 ಪ್ರಕರಣ ದಾಖಲಿಸಿ, 3,92,800ರೂ. ದಂಡ ವಿಧಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ, ನಗರದಲ್ಲಿ ಸೆ.7ರಿಂದ ಕಾರ್ಯಾಚರಣೆ ಆರಂಭಗೊಂಡಿದ್ದು, ಮಂಗಳೂರು ಉತ್ತರ ಸಂಚಾರ ವಿಭಾಗದಲ್ಲಿ ಅತೀಹೆಚ್ಚು 476 ಪ್ರಕರಣ ದಾಖಲಾಗಿದೆ. ಮಂಗಳೂರು ಪೂರ್ವ ಸಂಚಾರ ಠಾಣೆಯಲ್ಲಿ 430 ಪ್ರಕರಣ ದಾಖಲಿಸಿ 1.24ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದರು.

ದೇಶಾದ್ಯಂತ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಸೆ.1ರಂದು ಜಾರಿಗೆ ಬಂದಿದ್ದು, ನಗರ ಕಮಿಷನರೇಟ್ ವ್ಯಾಪ್ತಿಯ ನಾನಾ ಕಡೆ ಈಗಾಗಲೇ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ. ಮುಂದಿನ ಒಂದು ವಾರದಲ್ಲಿ ನಗರದ ಎಲ್ಲ ಸಂಚಾರ ಠಾಣಾ ವ್ಯಾಪ್ತಿಯಲ್ಲೂ ಹೊಸ ಮಾದರಿ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಯಾವ ಠಾಣೆಯಲ್ಲಿ ಎಷ್ಟು?: ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೂರ್ವ ಸಂಚಾರ ಠಾಣೆ 430 ಕೇಸು 1,24,500 ರೂ., ಪಶ್ಚಿಮ ಸಂಚಾರ ಠಾಣೆ 356 ಕೇಸು 86,900ರೂ., ಉತ್ತರ ಠಾಣೆ 476 ಕೇಸು 1,09,500 ರೂ., ದಕ್ಷಿಣ ಸಂಚಾರ ಠಾಣಾ ವ್ಯಾಪ್ತಿಯಲ್ಲಿ 373 ಕೇಸು 71,900 ದಂಡ ವಿಧಿಸಲಾಗಿದೆ.

ಮೂರು ದಿನಗಳಲ್ಲಿ ನೋಂದಣಿಯಾದ ಪ್ರಕರಣಗಳಲ್ಲಿ ಹೆಚ್ಚು ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದ ಹಾಗೂ ಸಿಗ್ನಲ್ ಜಂಪ್ ಮಾಡಿದ ಪ್ರಕರಣಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News