ಕೋಯನಗರ ಮೊಹಲ್ಲಾ ಆಡಳಿತ ಸಮಿತಿ ಮಹಾಸಭೆ

Update: 2019-09-11 12:52 GMT

ನಾವುಂದ, ಸೆ.11: ನಾವುಂದ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಅಂಗಸಂಸ್ಥೆಯಾದ ಕೋಯನಗರ ನೂರುಲ್ ಹುದಾ ಮಸೀದಿ ಹಾಗೂ ಬುಸ್ತಾನುಲ್ ಉಲೂಂ ಮದ್ರಸದ ಆಡಳಿತ ಸಮಿತಿಯ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಕೋಯನಗರ ಅಲ್-ಬುಸ್ತಾನ್ ಸಭಾಂಗಣದಲ್ಲಿ ನಡೆಯಿತು.

ಬಿ.ಜೆ.ಎಂ. ನಾವುಂದ ಮುತವಲ್ಲಿ ಬಿ.ಎ.ಸಯ್ಯಿದ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸ್ಥಳೀಯ ಇಮಾಮ್ ಕೊಂಬಾಳಿ ಕೆ.ಎಂ.ಎಚ್ ಝುಹುರಿ ದುವಾ ನೆರವೇರಿಸುವ ಮೂಲಕ ಉದ್ಘಾಟಿಸಿದರು. 2019-20ನೆ ಸಾಲಿಗೆ ನೂತನ ಸಮಿತಿಯನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ಇರ್ಷಾದ್ ಟಿ.ಎಂ.ಸಿ, ಪ್ರಧಾನ ಕಾರ್ಯದರ್ಶಿ ಯಾಗಿ ಅಡ್ವಕೇಟ್ ಇಲ್ಯಾಸ್ ಕೆ.ಎಂ., ಕೋಶಾಧಿಕಾರಿಯಾಗಿ ಅಬ್ದುಸ್ಸತ್ತಾರ್ ಜಿ.ಎಂ., ಉಪಾಧ್ಯಕ್ಷರಾಗಿ ಅಶ್ಫಾಖ್ ಅಹ್ಮದ್, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ರಫೀಕ್ ಮುಲ್ಲಾ, ಗೌರವ ಸಲಹೆಗಾರರಾಗಿ ಕೆ.ಸಿ.ಹಸೈನಾರ್ ಮುಸ್ಲಿಯಾರ್, ಬಿ.ಎಸ್.ಅಯ್ಯೂಬ್, ಅಬ್ದುಲ್ಲಾ ಡಬ್ಲುಎಫ್‌ಕೆ, ಕಾರ್ಯ ಕಾರಿ ಸಮಿತಿ ಸದಸ್ಯರುಗಳಾಗಿ ಇಮ್ತಿಯಾಝ್ ಅಹ್ಮದ್, ಮುಹಮ್ಮದ್ ಮುಲ್ಲಾ, ಇಸ್ಮಾಯಿಲ್ ಅಬ್ಬಾಸ್, ಶೇಖ್ ಅಹ್ಮದ್, ಮುಹಮ್ಮದ್ ಅಶ್ರಫ್ ಚೆಂಗಲ್, ಇಲ್ಯಾಸ್ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News