×
Ad

ಭಟ್ಕಳ: ಕ್ಯಾಂಪಸ್ ಸಂದರ್ಶನದಲ್ಲಿ ಕಜಾರಿಯ ಸೆರಾಮಿಕ್ಸ್ ಕಂಪನಿಗೆ ಆಯ್ಕೆ

Update: 2019-09-11 18:32 IST

ಭಟ್ಕಳ: ಮುರುಡೇಶ್ವರ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ನ ಕ್ಯಾಂಪಸ್ ಸಂದರ್ಶನದಲ್ಲಿ ಆಂಧ್ರಪ್ರದೇಶದ ತಿರುಪತಿ ಹತ್ತಿರ ಇರುವ ಕಜಾರಿಯ ಸೆರಾಮಿಕ್ಸ್ ಕಂಪನಿಗೆ ಮುರುಡೇಶ್ವರದಲ್ಲಿ ಮೂರು  ವರ್ಷ ಡಿಪ್ಲೋಮಾ  ಸಿರಾಮಿಕ್ ಟೆಕ್ನಾಲಜಿ ಮುಗಿಸಿದ ಮಹೇಶ್ ಲಕ್ಷ್ಮಣ್ ನಾಯ್ಕ್  ಬೈಲೂರು, ಗೌತಮ್ ದೇವರಾಜ್ ವೆಂಗೂಲೇಕರ್ ಶಿರಾಲಿ, ಪವನ್ ಕೃಷ್ಣ ನಾಯ್ಕ ಹೊನ್ನಾವರ ಆಯ್ಕೆಯಾಗಿದ್ದಾರೆ.

ಮುರುಡೇಶ್ವರ ಸೆರಾಮಿಕ್ಸ್ ಲಿಮಿಟೆಡ್ ಕಾರೇಕಲ್ ಪಾಂಡಿಚೇರಿಗೆ ಡಿಪ್ಲೋಮಾ ಸಿರಾಮಿಕ್ ಟೆಕ್ನಾಲಜಿ ಮುಗಿಸಿದ ಕಿರಣ್ ರಮೇಶ್ ನಾಯ್ಕ್ ಶಿರಾಲಿ, ರಾಮಚಂದ್ರ ಟಿ ಗೊಂಡ ಮತ್ತು ಸಂಪತ್ತು ಸಂಜೀವ ಕಾರ್ವಿ ಕರಿಕಲ್ ಭಟ್ಕಳ ಒಟ್ಟು ಆರು ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಉದ್ಯೋಗಾಧಿಕಾರಿ ಹಾಗೂ ಉಪ ಪ್ರಾಚಾರ್ಯರಾದ ಕೆ. ಮರಿಸ್ವಾಮಿ ಪ್ರಕಟಣಯಲ್ಲಿ ತಿಳಿಸಿರುತ್ತಾರೆ.

ಸಿರಾಮಿಕ್ ನ  ಹಿರಿಯ ಉಪನ್ಯಾಸಕ  ಪ್ರದ್ಯುಮ್ನ ಪಡುಕೋಣೆ ಉಪಸ್ಥಿತರಿದ್ದಾರೆ. ಪ್ರಾಚಾರ್ಯರಾದ ಸಂತೋಷ ಆರ್. ಎ.,ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News