ಅಂತರಾಷ್ಟ್ರೀಯ ನಿಯತಕಾಲಿಕದ ಪರಿವೀಕ್ಷಕರಾಗಿ ಡಾ. ಚಂದ್ರಶೇಖರ್ ಆಯ್ಕೆ

Update: 2019-09-11 13:07 GMT

ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ| ಕೆ. ಚಂದ್ರಶೇಖರ್ ಪ್ರತಿಷ್ಠಿತ `ಸ್ಪ್ರಿಂಗರ್' ಪಬ್ಲಿಕೇಶನ್ಸ್‍ನ ಅಂತರಾಷ್ಟ್ರೀಯ ನಿಯತಕಾಲಿಕ `ಜರ್ನಲ್ ಆಫ್ ರೇಡಿಯೋ ಅನಾಲಿಟಿಕಲ್ ಆಂಡ್ ನ್ಯೂಕ್ಲಿಯರ್ ಕೆಮಿಸ್ಟ್ರಿ' ಇದರ ಪರಿವೀಕ್ಷಕರಾಗಿ ಆಯ್ಕೆಯಾಗಿದ್ದಾರೆ.

ವಿಶ್ವದಾದ್ಯಂತ ಇರುವ ಸಂಶೋಧಕರಿಂದ ಸಲ್ಲಿಕೆಯಾಗುವ ವೈಜ್ಞಾನಿಕ ಪ್ರಬಂಧಗಳನ್ನು ಪರಿಶೀಲಿಸಿ ಅವುಗಳ ಅರ್ಹತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ. ಇತ್ತೀಚೆಗೆ ಇದೇ ಜರ್ನಲ್‍ನಲ್ಲಿ ಅವರ `ಡಿಸ್‍ಇಕ್ಯುಲಿಬ್ರಿಯಮ್ ಆಫ್ ಯುರೇನಿಯಮ್ ಸೀರೀಸ್ ರೇಡಿಯೋ ನ್ಯೂಕ್ಲೈಡ್ಸ್ ಇನ್ ಸಾಯಿಲ್ ಅಂಡ್ ಪ್ಲಾಂಟ್ಸ್ ಆಫ್ ಸೌತ್ ಇಂಡಿಯಾ' ಎಂಬ ವೈಜ್ಞಾನಿಕ ಲೇಖನವು ಪ್ರಕಟಗೊಂಡಿತ್ತು.

ಡಾ. ಕೆ. ಚಂದ್ರಶೇಖರ್ ಅವರು 2018ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ `ಸ್ಟಡೀಸ್ ಆನ್ ಕಾನ್ಸಂಟ್ರೇಶನ್  ಆಫ್ ರೇಡಿಯೋ ನ್ಯೂಕ್ಲೈಡ್ಸ್ ಅಂಡ್ ಟ್ರೇಸ್ ಎಲಿಮೆಂಟ್ಸ್ ಇನ್ ಸಮ್ ಸಿಲೆಕ್ಟೆಡ್ ಮೆಡಿಸಿನಲ್ ಪ್ಲಾಂಟ್ಸ್' ಎಂಬ ವಿಷಯದಲ್ಲಿ ಪಿಎಚ್‍ಡಿ ಪದವಿಯನ್ನು ಪಡೆದಿದ್ದು, ಇವರ ಹಲವಾರು ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News