ಮಣಿಪಾಲ: ನ್ಯೂಕ್ಲಿಯರ್ ಫೀಜಿಕ್ಸ್ ಕೃತಿ ಬಿಡುಗಡೆ

Update: 2019-09-11 15:57 GMT

ಮಣಿಪಾಲ, ಸೆ.11: ಇಂದು ನಾವು ಪ್ರಕೃತಿಯಲ್ಲಿ ಕಾಣಲು ಸಿಗದ ಸ್ವಾಭಾವಿಕ ಮೂಲಧಾತುವನ್ನು ಕೃತಕವಾಗಿ ತಯಾರಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಮಾನವನ ಬಹುದಿನಗಳ ಕನಸಾದ ರಾಸಾಯನಿಕ ಮೂಲಧಾತುಗಳನ್ನು ತಯಾರಿಕೆಯೂ ಇಂದು ಸಾದ್ಯವಾಗಿದೆ. ಪ್ರಕೃತಿಯಲ್ಲಿ ಸಿಗುವುದಕ್ಕಿಂತ ಎಷ್ಟೋ ಹೆಚ್ಚು ಭಾರದ ‘ಸೂಪರ್‌ಹೆವಿ ಧಾತು (ಎಸ್‌ಎಚ್‌ಇ)’ವನ್ನು ಇತ್ತೀಚೆಗೆ ಸೃಷ್ಟಿಸಲಾಗಿದೆ ಎಂದು ಜರ್ಮನಿಯ ನ್ಯೂಕ್ಲಿಯರ್ ವಿಜ್ಞಾನಿ ಡಾ.ಗಾಟ್‌ಫ್ರೈಡ್ ಮುಝೆನ್‌ಬರ್ಗ್ ಹೇಳಿದ್ದಾರೆ.

ಮಂಗಳವಾರ ಮಾಹೆಯ ಮಣಿಪಾಲ ಸೆಂಟರ್ ಫಾರ್ ನ್ಯಾಚುರಲ್ ಸಾಯನ್ಸ್‌ನಲ್ಲಿ ನಡೆದ ಮಣಿಪಾಲ ಯುನಿವರ್ಸಿಟಿ ಪ್ರೆಸ್ ಪ್ರಕಟಿಸಿದ ‘ಸೂಪರ್‌ಹೆವಿ ಎಲಿಮೆಂಟ್ಸ್’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಜರ್ಮನಿಯಿಂದ ಸ್ಕೈಪಿ ಮೂಲಕ ಅವರು ಮಾತನಾಡುತಿದ್ದರು.

ಶೈತೀಕೃತ ಸಮ್ಮಿಳನದ (ಕೋಲ್ಡ್ ಫ್ಯೂಷನ್) ಮೂಲಕ ಸೂಪರ್‌ಹೆವಿ ಎಲಿಮಂಟ್ಸ್‌ನ್ನು (ಎಸ್‌ಎಚ್‌ಇ) ಸೃಷ್ಟಿಸಿದ ಜರ್ಮನಿ ತಂಡದ ನೇತೃತ್ವ ವಹಿಸಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಡಾ.ಗಾಟ್‌ಫ್ರೈಡ್ ವಿವರಿಸಿದರು. ಈ ತಂಡ ಸೂಪರ್‌ಹೆವಿ ಮೂಲಧಾತುಗಳಾದ ಬಿಎಚ್107, ಎಚ್‌ಎಸ್108 ಹಾಗೂ ಎಂಟಿ109ನ್ನು ಸೃಷ್ಟಿಸುವಲ್ಲಿ ಯಶಸ್ಲಿಯಾಗಿತ್ತು. ಇಲ್ಲಿ ಬಿಡುಗಡೆಯಾದ ಪುಸ್ತಕ ಹೊಸ ಸಂಶೋಧನೆಗಳ ಮೇಲೆ ಬೆಳಕು ಚೆಲ್ಲುತ್ತದೆ.

 ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ಮಾತನಾಡಿ, ಡಾ. ಗಾಟ್‌ಫ್ರೈಡ್ ವಿಶಿಷ್ಟ ವಿಜ್ಞಾನಿಯಾಗಿದ್ದು, ಅತ್ಯುತ್ತಮ ಸಂಶೋಧಕರಾಗಿದ್ದಾರೆ. ಇದಕ್ಕೆ ಅವರು ಕಂಡು ಹಿಡಿದ ಎಲ್ಲವೂ ಸಾಕ್ಷಿಯಾಗಿವೆ. ನಮಗೆ ಕಾಣಿಸದ ಹಲವು ವಸ್ತುಗಳನ್ನು ಅವರು ಬೆನ್ನಹತ್ತಿ ಕಂಡು ಹಿಡಿದಿದ್ದಾರೆ ಎಂದರು.

ಡಾ.ಗಾಟ್‌ಫ್ರೈಡ್ ಅವರೊಂದಿಗೆ ಸಂಶೋಧಕರಾಗಿ ಕೆಲಸ ಮಾಡಿದ ಎಂಸಿಎನ್‌ಎಸ್‌ನ ನಿರ್ದೇಶಕಿ ಡಾ.ಮೋಹಿನಿ ಗುಪ್ತಾ ಅವರು, ವಿಜ್ಞಾನಿಯೊಂದಿಗೆ ಕೆಲಸ ಮಾಡಿದ ತನ್ನ ಅನುಭವಗಳನ್ನು ಹಂಚಿಕೊಂಡರು. ಅವರೊಂದಿಗೆ ಬಹಳಷ್ಟು ಐಸೋಟೋಪ್‌ಗಳು ಹಾಗೂ ಏಳು ಮೂಲಧಾತುಗಳ ಸಂಶೋಧನೆಯಲ್ಲಿ ತಾನು ಪಾಲ್ಗೊಂಡಿರುವುದಾಗಿ ಅವರು ತಿಳಿಸಿದರು. ಇಲ್ಲಿ ಬಿಡುಗಡೆಯಾಗಿರುವ ಪುಸ್ತಕ ಅಣು ಭೌತವಿಜ್ಞಾನಿಗಳಿಗೆ ಅತ್ಯಂತ ಉಪಯುಕ್ತದ್ದಾಗಿದೆ ಎಂದು ಡಾ.ಗುಪ್ತಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News