×
Ad

ಮಹಡಿಯ ಮೆಟ್ಟಿಲಿನಿಂದ ಬಿದ್ದು ಯುವಕ ಮೃತ್ಯು

Update: 2019-09-11 21:55 IST

ಉಡುಪಿ, ಸೆ.11: ಮೆಟ್ಟಿಲಿನಿಂದ  ಇಳಿಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸ.10ರಂದು ಮಧ್ಯಾಹ್ನ ವೇಳೆ ನಗರದ ನ್ಯೂ ವ್ಯವಹಾರ್ ಬಿಲ್ದಿಂಗ್‌ನಲ್ಲಿ ನಡೆದಿದೆ.

 ಮೃತರನ್ನು ತೀರ್ಥಹಳ್ಳಿಯ ಕೇಶವ(38) ಎಂದು ಗುರುತಿಸಲಾಗಿದೆ. ಹೊಟೇಲ್‌ನಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡಿಕೊಂಡಿದ್ದ ಇವರು, ನ್ಯೂ ವ್ಯವಹಾರ್ ಕಟ್ಟಡ ಮೊದಲನೆ ಮಹಡಿಯಲ್ಲಿರುವ ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿ ವಾಪಾಸು ಮೆಟ್ಟಿಲಿನಿಂದ ಕೆಳಗೆ ಇಳಿಯುವಾಗ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News