ಮಂಗಳೂರು: ಪೊಲೀಸ್ ಪರೇಡ್ ನೇರ ಪ್ರಸಾರ

Update: 2019-09-11 16:30 GMT

ಮಂಗಳೂರು, ಸೆ.11: ಹೊಸ ಬೀಟ್ ವ್ಯವಸ್ಥೆ, ಬೀಟ್ ಆ್ಯಪ್ ಮೂಲಕ ನಾಗರಿಕರನ್ನು ಬೀಟ್ ವ್ಯವಸ್ಥೆಗೆ ಒಳಪಡಿಸಿರುವ ಪ್ರಯೋಗದಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅವರು ಈಗ ಇನ್ನೊಂದು ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿದ್ದಾರೆ.

ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯುವ ಪೊಲೀಸ್ ಸೇವಾ ಕವಾಯತನ್ನು ಇದೇ ಮೊದಲ ಬಾರಿಗೆ ನೇರ ಪ್ರಸಾರ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ಪೊಲೀಸ್ ಇಲಾಖೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಉದ್ದೇಶಿಸಿದ್ದಾರೆ.

ಸೆ.13ರಂದು ಬೆಳಗ್ಗೆ 8 ಗಂಟೆಯಿಂದ ಸುಮಾರು ಒಂದು ಗಂಟೆ ಕಾಲ ಈ ಕವಾಯತು ನಗರದ ಪೊಲೀಸ್ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ಕಮಿಷನರೇಟ್ ವ್ಯಾಪ್ತಿಯ 18 ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಳ್ಳುವರು. ಈ ವೇಳೆ ಪೊಲೀಸ್ ಇಲಾಖೆಯ ಆಗುಹೋಗು ಹಾಗೂ ವ್ಯವಸ್ಥೆಯಲ್ಲಿ ಕಾನೂನು ಪಾಲನೆ ಮುಂತಾದ ವಿಚಾರಗಳನ್ನು ಉದ್ದೇಶಿಸಿ ಕಮಿಷನರ್ ಡಾ.ಪಿ.ಎಸ್.ಹರ್ಷ ಮಾತನಾಡುವರು. ಈ ಪರೇಡ್ ಟ್ವೀಟರ್, ಫೇಸ್‌ಬುಕ್‌ಗಳಲ್ಲಿ ನೇರ ಪ್ರಸಾರ ಕಾಣಲಿದೆ.

ಪೊಲೀಸ್ ಪರೇಡ್ ನೇರ ಪ್ರಸಾರ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಮೊದಲು. ಸಾರ್ವಜನಿಕರು ಇದನ್ನು ಮೊಬೈಲ್ ಮೂಲಕ ನೇರವಾಗಿ ವೀಕ್ಷಿಸಬಹುದು ಎಂದು ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News