“ಮರಳಿ ಶಾಲೆಗೆ”- ಪ್ರವಾಹ ಪೀಡಿತ ಶಾಲಾ ಮಕ್ಕಳಿಗೆ ಪಿ.ಎ. ಎಜುಕೇಶನಲ್ ಟ್ರಸ್ಟ್ ವತಿಯಿಂದ ಸ್ಕೂಲ್ ಕಿಟ್

Update: 2019-09-11 17:28 GMT

ಕೊಣಾಜೆ: ಪಿ.ಎ. ಎಜುಕೇಶನಲ್ ಟ್ರಸ್ಟ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಮರಳಿ ಶಾಲೆಗೆ – ಎಂಬ ಅಭಿಯಾನದ ಅಂಗವಾಗಿ ಪ್ರವಾಹ ಪೀಡಿತ ಪ್ರದೇಶಗಳ ಶಾಲಾ ಮಕ್ಕಳಿಗೆ ಸ್ಕೂಲ್ ಕಿಟ್ ಹಂಚುವ ಕಾರ್ಯಕ್ರಮಕ್ಕೆ ಟ್ರಸ್ಟ್ ನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಅಬ್ದುಲ್ಲಾ ಇಬ್ರಾಹಿಂ ಅವರು  ಪಿ.ಎ.ಕ್ಯಾಂಪಸ್‍ನಲ್ಲಿ ಚಾಲನೆ ನೀಡಿದರು.

ಪಿ. ಎ. ಎಜುಕೇಶನ್ ಟ್ರಸ್ಟ್ ನ ಶೈಕ್ಷಣಿಕ ನಿರ್ದೇಶಕರಾದ  ಡಾ. ಸರ್ಫ್‍ರಾಝ್ ಜೆ.  ಹಾಸಿಂ, ಪಿ.ಎ. ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಶರೀಫ್, ಉಪ ಪ್ರಾಂಶುಪಾಲರಾದ ಡಾ. ರಮೀಝ್, ಪಿ.ಎ. ಪಾಲೆಟೆಕ್ನಿಕ್ ಪ್ರಾಂಶುಪಾಲರಾದ ಪ್ರೊ.ಕೆ.ಪಿ.ಸೂಫಿ, ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್ “ಮರಳಿ ಶಾಲೆಗೆ” ಅಭಿಯಾನದ ಸಂಯೋಜಕರಾದ ಪ್ರೊ.ಇಸ್ಮಾಯಿಲ್ ಎಸ್, ಶ್ರೀ. ಇಕ್ಬಾಲ್, ಪ್ರೊ.ಇಸ್ಮಾಯಿಲ್ ಶಾಫಿ, ಡಾ. ಮುಬಿನ್,  ಪ್ರೊ. ಮುಸ್ತಾಫ, ಪ್ರೊ. ಸಲಿಂ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News