ಚಂಡಮಾರುತ ಬಳಿಕ 2,500 ಮಂದಿ ನಾಪತ್ತೆ

Update: 2019-09-12 15:55 GMT

ನ್ಯಾಸಾ (ಬಹಾಮಸ್), ಸೆ. 12: ಬಹಾಮಸ್‌ಗೆ ಚಂಡಮಾರುತ ಡೊರಿಯನ್ ಅಪ್ಪಳಿಸಿದ ಬಳಿಕ ಸುಮಾರು 2,500 ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆ ಬುಧವಾರ ಹೇಳಿದೆ.

ನಾಪತ್ತೆಯಾಗಿರುವವರ ಪೈಕಿ ಕೆಲವರು ಮುಂದಿನ ದಿನಗಳಲ್ಲಿ ಪತ್ತೆಯಾಗಬಹುದಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸ್ಥೆಯ ವಕ್ತಾರ ಕಾರ್ಲ್ ಸ್ಮಿತ್ ಅಭಿಪ್ರಾಯಪಟ್ಟರು.

  ‘‘ಈಗಿನ ಮಟ್ಟಿಗೆ, ಬಹಾಮಸ್ ಸರಕಾರದ ನಾಪತ್ತೆಯಾಗಿರುವವರ ಪಟ್ಟಿಯಲ್ಲಿ ಸುಮಾರು 2,500 ಮಂದಿಯ ಹೆಸರನ್ನು ದಾಖಲಿಸಲಾಗಿದೆ. ಆದರೆ, ಶಿಬಿರಗಳಲ್ಲಿ ವಾಸಿಸುತ್ತಿರುವವರು ಮತ್ತು ಸ್ಥಳಾಂತರಗೊಂಡವರ ಸರಕಾರಿ ದಾಖಲೆಗಳೊಂದಿಗೆ ಈ ಪಟ್ಟಿಯನ್ನು ಪರಿಶೀಲಿಸಲಾಗಿಲ್ಲ’’ ಎಂದರು.

ಚಂಡಮಾರುತದ ಪ್ರಕೋಪಕ್ಕೆ ಕನಿಷ್ಠ 50 ಮಂದಿ ಬಲಿಯಾಗಿದ್ದಾರೆ. ಆದರೆ, ಈ ಸಂಖ್ಯೆ ಗಣನೀಯವಾಗಿ ಹೆಚ್ಚುವ ಭೀತಿಯನ್ನು ಸರಕಾರಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News