×
Ad

ಅತಿಥಿ ಉಪನ್ಯಾಸಕರ ಆಯ್ಕೆ: ಸಂದರ್ಶನ

Update: 2019-09-12 22:15 IST

ಮಂಗಳೂರು, ಸೆ.12: ಮಂಗಳೂರು ವಿಶ್ವವಿದ್ಯಾನಿಲಯ 2019-20ನೇ ಸಾಲಿಗೆ ಎಂ.ಎಡ್. (ರೆಗ್ಯುಲರ್) ಕೋರ್ಸಿಗೆ ಅತಿಥಿ ಉಪನ್ಯಾಸಕರ ಅವಶ್ಯಕತೆ ಇದ್ದು, ಮಂಗಳೂರು ವಿವಿ ಕುಚಿಸಚಿವರ ಕಚೇರಿಯಲ್ಲಿ ಸೆ.19ರಂದು ಬೆಳಗ್ಗೆ 11ಕ್ಕೆ ಸಂದರ್ಶನ ಏರ್ಪಡಿಸಲಾಗಿದೆ.

ಅಂಗೀಕೃತ ವಿಶ್ವವಿದ್ಯಾನಿಲಯದಿಂದ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎಂ.ಎಡ್./ಎಂ.ಎ. ಎಜುಕೇಶನ್ ಪದವಿ ಹೊಂದಿರುವ (ಕನಿಷ್ಠ ಶೇ.55ಅಂಕ) ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವರ್ಗ, ಸೇವಾನುಭವ, ದೂ.ಸಂ. ಇತ್ಯಾದಿ ಸ್ವವಿವರವುಳ್ಳ ಅರ್ಜಿ ಮತ್ತು ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿ ಹಾಗೂ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಆಗಮಿಸಬೇಕು.

ಎನ್‌ಇಟಿ/ಎಸ್‌ಎಲ್‌ಇಟಿ ಉತ್ತೀರ್ಣ/ಪಿಎಚ್‌ಡಿ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ವಿವರಗಳನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್ www.mangaloreuniversity.ac.in  ಇದರಲ್ಲಿ ಪಡೆಯಬಹುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News