ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ: ವಂ.ಮೆಂಡೋನ್ಸಾ

Update: 2019-09-13 14:48 GMT

ಉಡುಪಿ, ಸೆ.13: ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ. ಕ್ರಮಬದ್ಧ ವಾದ ಕಲಿಕೆಯಿಂದ ಗುರಿ ಸಾಧಿಸಲು ಸಾಧ್ಯ. ಉತ್ತಮ ಜೀವನ ವೌಲ್ಯ ಗಳೊಂದಿಗೆ ಜೀವನದಲ್ಲಿ ಬದುಕುವ ಹಾಗೂ ಸಾಧಿಸುವ ಶಿಕ್ಷಣ ಬೇಕು ಎಂದು ಉಡುಪಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಹಾಗೂ ಉಡುಪಿ ಶೋಕಾ ಮಾತಾ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ. ವಲೇರಿಯನ್ ಮೆಂಡೋನ್ಸಾ ಹೇಳಿದ್ದಾರೆ.

ಉಡುಪಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಲಾದ ವಿದ್ಯಾರ್ಥಿಗಳ ಪೋಷಕರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿ, ಇಂದಿನ ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ ಮತ್ತು ಚುರುಕಾಗಿದ್ದು, ಪೋಷಕರು ಮಕ್ಕಳೊಂದಿಗೆ ವ್ಯವಹರಿಸುವಾಗ ಧನಾತ್ಮಕವಾಗಿ ಸ್ಫಂದಿಸುವ ಅನಿವಾರ್ಯತೆ ಇದೆ. ಮಕ್ಕಳು ಹೇಳಿದ್ದನ್ನು ಕಲಿಯುವುದಕ್ಕಿಂತ ಹೆಚ್ಚಾಗಿ ನೋಡಿ ಕಲಿಯುತ್ತಾರೆ. ಮನೆಯ ಸಂಸ್ಕಾರ, ವಾತಾವರಣ ಹಿರಿಯರ ನಡವಳಿಕೆ, ಶಾಲೆಯಲ್ಲಿ ಶಿಕ್ಷಕರ ನಡವಳಿಕೆಯೂ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವುದರಿಂದ ಮನೆ ಯಲ್ಲೂ, ಶಾಲೆಗಳಲ್ಲೂ ಉತ್ತಮ ಜೀವನ ವೌಲ್ಯಗಳೊಂದಿಗೆ ಕಲಿಕೆಗೆ ಪೂರಕ ವಾದ ವಾತಾವರಣ ನಿರ್ಮಾಣಗೊಳ್ಳಬೇಕು ಎಂದರು.

ಶಿಕ್ಷಕಿ ಮರಿಯಾ ಕ್ರಾಸ್ಟ ಶಾಲಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ ಆಚಾರ್ಯ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಹೆರಾಲ್ಡ್ ಡಿಸೋಜ ಸ್ವಾಗತಿಸಿದರು. ಸುಪ್ರೀತಾ ವಂದಿಸಿ ದರು. ಶಿಕ್ಷಕಿ ಜೆಸಿಂತಾ ಅಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿಯರಾದ ಸೌಮ್ಯಾ, ವಿದ್ಯಾ, ಹನೀಶ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News