ಮಕ್ಕಳ ಪೋಷಣೆಗೆ ಹೆಚ್ಚಿನ ಕಾಳಜಿ ವಹಿಸಿ: ಗ್ರೇಸಿ ಗೊನ್ಸಾಲ್ವಿಸ್

Update: 2019-09-13 14:57 GMT

ಉಡುಪಿ, ಸೆ.13:ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗದಂತೆ, ಅವರಿಗೆ ಸೂಕ್ತ ಪೌಷ್ಠಿಕ ಆಹಾರ ನೀಡುವ ಮೂಲಕ ಮಕ್ಕಳ ಪೋಷಣೆ ಕುರಿತಂತೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಹೆತ್ತವರಿಗೆ ಕಿವಿಮಾತು ಹೇಳಿದ್ದಾರೆ.

ಶುಕ್ರವಾರ ಉಡುಪಿ ಬಾಲ ಭವನದಲ್ಲಿ, ನಗರಸಭೆ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆ ಮತ್ತು ಸ್ತನ್ಯಪಾನ ಉತ್ತೇಜನ ಅಭಿಯಾನ, ‘ಪೋಷಣ್ ಅಭಿಯಾನ್- ಪೋಷಣಾ ಮಾಸ’ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.

ಪೋಷಕರು ಮಕ್ಕಳ ಪೋಷಣೆಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಆರೋಗ್ಯವಂತ ಮಕ್ಕಳನ್ನು ಪಡೆಯುವುದು ಸಾದ್ಯ.ಈ ನಿಟ್ಟಿನಲ್ಲಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ, ಮಗು ಜನಿಸುವ ಪೂರ್ವದಲ್ಲಿ ಮತ್ತು ಮಗು ಜನನದ ನಂತರ ಮಾತೃವಂದನಾ ಯೋಜನೆಯಡಿ ನೆರವು ನೀಡಲಾಗುತ್ತಿದ್ದು, ಗರ್ಭಿಣಿ ಮತ್ತು ಬಾಣಂತಿಯರು ಯೋಜನೆಯ ಪ್ರಯೋಜನ ಪಡೆಯುವಂತೆ ಗ್ರೇಸಿ ಗೊನ್ಸಾಲ್ವಿಸ್ ತಿಳಿಸಿದರು.

ನವಜಾತ ಮಕ್ಕಳಿಗೆ ಸ್ತನ್ಯಪಾನದ ಅಗತ್ಯ ಮತ್ತು ಅದರ ಮಹತ್ವದ ಕುರಿತು ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ. ಅಶೋಕ್, ಮಗು ಜನಿಸಿದ ಒಂದು ಗಂಟೆಯ ಒಳಗೆ ಸ್ತನ್ಯಪಾನ ಮಾಡಿಸಿದರೆ ಮಕ್ಕಳಿಗೆ ಹೆಚ್ಚಿನ ರೋಗ ನಿರೋಧಕ ಶಕ್ತಿ ದೊರೆಯಲಿದೆ. ಈ ಬಗ್ಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗರ್ಭಿಣಿ ಮತ್ತು ಬಾಣಂತಿಯರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಮಕ್ಕಳಿಗೆ ನೀಡಬೇಕಾದ ಕಡ್ಡಾಯ ಲಸಿಕೆಗಳ ಮತ್ತು ರೋಟಾವೈರಸ್ ಲಸಿಕೆ ಕುರಿತು ಡಾ. ಅಶೋಕ್ ಮಾಹಿತಿ ನೀಡಿದರು. ರೋಟರಿ ಉಪರಾಜ್ಯಪಾಲ ಡಾ. ಶೇಷ್ಪ ರೈ ಕಾರ್ಯಕ್ರಮ ಉದ್ಘಾಟಿಸಿದರು.

ಮಕ್ಕಳಿಗೆ ನೀಡಬೇಕಾದ ಕಡ್ಡಾಯ ಲಸಿಕೆಗಳ ಮತ್ತು ರೋಟಾವೈರಸ್ ಲಸಿಕೆ ಕುರಿತು ಡಾ. ಅಶೋಕ್ ಮಾಹಿತಿ ನೀಡಿದರು. ರೋಟರಿ ಉಪರಾಜ್ಯಪಾಲ ಡಾ. ಶೇಷಪ್ಪ ರೈ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಸಮುದಾಯ ಸಂಘಟನಾಧಿಕಾರಿ ನಾರಾಯಣ್, ಆಯುಷ್ಮಾನ್ ಭಾರತ ಯೋಜನೆಯ ಜಿಲ್ಲಾ ಸಂಯೋಜಕ ಜಗನ್ನಾಥ್,ಅಂಗನವಾಡಿ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಮಕ್ಕಳ ಪೋಷಕರು ಉಪಸ್ಥಿತ ರಿದ್ದರು. ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರ ಪ್ರದರ್ಶನ ಏರ್ಪಡಿಸಲಾಗಿತ್ತು.

ರೋಟರಿ ಅಧ್ಯಕ್ಷ ಜನಾರ್ಧನ ಭಟ್ ಸ್ವಾಗತಿಸಿ ರಾಮಚಂದ್ರ ಉಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News