ವಿ.ಆರ್.ಕಿದಿಯೂರು ಸಂಸ್ಮರಣೆ, ಸಹಾಯಧನ ವಿತರಣೆ
Update: 2019-09-13 21:45 IST
ಉಡುಪಿ, ಸೆ.13: ಉಡುಪಿಯ ಹಿರಿಯ ನ್ಯಾಯವಾದಿ ಹಾಗೂ ಸಮಾಜ ಕಾರ್ಯಕರ್ತರಾಗಿದ್ದ ವಿ.ಆರ್.ಕಿದಿಯೂರು ಇವರ ಸಂಸ್ಮರಣಾ ಕಾರ್ಯಕ್ರಮ ಸೆ.15ರ ಸಂಜೆ 4 ಗಂಟೆಗೆ ಉಡುಪಿ ಕೋರ್ಟ್ ರಸ್ತೆಯಲ್ಲಿರುವ ಕಿದಿಯೂರು ಟ್ರಸ್ಟ್‌ನಲ್ಲಿ ಜರಗಲಿದೆ.
ಇದೇ ಸಂದರ್ಭದಲ್ಲಿ ಕಿದಿಯೂರು ನಾಗಲಕ್ಷ್ಮೀ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ವೈದ್ಯಕೀಯ ನೆರವಿನ ವಿತರಣಾ ಕಾರ್ಯಕ್ರಮವೂ ನಡೆಯಲಿದೆ. ಟ್ರಸ್ಟ್‌ನ ಅಧ್ಯಕ್ಷ ಬಿ.ಜಿ.ರಾವ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರೈಮ್ ಸಂಸ್ಥೆಯ ಸಂಸ್ಥಾಪಕ ರತ್ನಕುಮಾರ್ ಸಂಸ್ಮರಣ ಭಾಷಣ ಮಾಡಲಿರುವರು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ.ರಾಧಾಕೃಷ್ಣ ಆಚಾರ್ಯ ತಿಳಿಸಿದ್ದಾರೆ.