ತಪಾಸಣೆ ವೇಳೆ ಬೈಕ್ ನಿಲ್ಲಿಸದೆ ಪರಾರಿ: ದೂರು

Update: 2019-09-13 16:20 GMT

ಮಲ್ಪೆ, ಸೆ.13: ವಡಭಾಂಡೇಶ್ವರ ಎಂಬಲ್ಲಿ ಸೆ.12ರಂದು ಮಧ್ಯಾಹ್ನ ವೇಳೆ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ ನಿಲ್ಲಿಸದೆ ಅತಿವೇಗವಾಗಿ ಚಲಾಯಿಸಿಕೊಂಡು ಪರಾರಿಯಾದ ಬೈಕ್ ಸವಾರನ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಮಲ್ಪೆ ಎಸ್ಸೈ ಮಧು ಬಿ. ಸಿಬ್ಬಂದಿ ಜೊತೆ ವಾಹನ ತಪಾಸಣೆ ನಡೆಸುವಾಗ ವಡಭಾಂಡೇಶ್ವರ ಕಡೆಯಿಂದ ಮಲ್ಪೆಕಡೆಗೆ ಕೆಎ-20-ವಿ-9320ನೇ ನಂಬರಿನ ಬೈಕಿನಲ್ಲಿ ಸವಾರ, ಹಿಂಬದಿಯಲ್ಲಿ ಇಬ್ಬರು ಸಹ ಸವಾರರನ್ನು ಕುಳ್ಳಿರಿಸಿಕೊಂಡು ತಲೆಗೆ ಹೆಲ್ಮೆಟ್ ಧರಿಸದೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು, ಈ ವೇಳೆ ಬೈಕ್‌ನ್ನು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದೆ ಅತೀವೇಗವಾಗಿ ಮಲ್ಪೆ ಕಡೆಗೆ ಚಲಾಯಿಸಿಕೊಂಡು ಹೋಗಿರುವು ದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News