×
Ad

‘ಹಿಂದಿ ದಿವಸ್’ ದಿನ ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ದಕ್ಷಿಣ ಭಾರತೀಯರು

Update: 2019-09-14 14:29 IST

ಹೊಸದಿಲ್ಲಿ, ಸೆ.14: ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿಸುವ ಅರ್ಥದ ಮತ್ತು ಏಕ ಭಾಷೆಯ ಬಗ್ಗೆ ಅಮಿತ್ ಶಾ ಅವರ ಟ್ವೀಟ್ ಹಾಗು ಹಲವು ಕ್ಷೇತ್ರಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧ ‘ಹಿಂದಿ ದಿವಸ್’ ದಿನವಾದ ಇಂದು ದಕ್ಷಿಣ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷಿಕರು ಟ್ವಿಟರ್ ನಲ್ಲಿ #StopHindiImposition ಹ್ಯಾಶ್ ಟ್ಯಾಗ್ ಮೂಲಕ ಅಭಿಯಾನವೊಂದನ್ನು ಆರಂಭಿಸಿದ್ದು, ಇದೀಗ ನಂಬರ್ 1 ಟ್ರೆಂಡಿಂಗ್ ಆಗಿದೆ.

“ಹಿಂದಿ ವಿರುದ್ಧ ಅಭಿಯಾನ ಟ್ರೆಂಡಿಂಗ್ ಆಗುತ್ತಿರುವುದರಿಂದ ನಾನು ಸಂತಸಗೊಂಡಿದ್ದೇನೆ. ವಿವಿಧತೆಯಲ್ಲಿ ಏಕತೆ” ಎಂದು ಮ್ಯಾಡಿ ಎನ್ನುವ ಟ್ವಿಟರ್ ಖಾತೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

“ಬೆಂಗಾಲಿ ಹಿಂದಿಗೆ ಸಮನಾಗಿದೆ, ತಮಿಳು ಹಿಂದಿಗೆ ಸಮನಾಗಿದೆ. ಗುಜರಾತಿ ಹಿಂದಿಗೆ ಸಮನಾಗಿದೆ, ಕನ್ನಡ ಹಿಂದಿಗೆ ಸಮನಾಗಿದೆ, ಎಲ್ಲಾ ಭಾಷೆಗಳೂ ಹಿಂದಿಗೆ ಸಮನಾಗಿವೆ. ಹಿಂದಿ ಹೇರಿಕೆಯನ್ನು ನಿಲ್ಲಿಸಿ ಮತ್ತು ಸಾವಿರಾರು ವರ್ಷಗಳಿಂದ ಇರುವ ವಿವಿಧತೆಯನ್ನು ಗೌರವಿಸಿ” ಎಂದು ಶ್ರೀವತ್ಸ ಅವರು ಟ್ವೀಟ್ ಮಾಡಿದ್ದು, ಮತ್ತೊಂದು ಟ್ವೀಟ್ ನಲ್ಲಿ “ಅಮಿತ್ ಶಾ ನನ್ನ ಭಾಷೆ ಕನ್ನಡ, ಹಿಂದಿ, ಉರ್ದು, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳೂ ನನಗೆ ತಿಳಿದಿದೆ. ನಾನು ಎಲ್ಲಾ ಭಾಷೆಗಳನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ, ಪ್ರಮುಖವಾಗಿ ಹಿಂದಿಯನ್ನು. ಆದರೆ ಭಾರತ ಹಿಂದಿ ಭಾಷಿಕ ದೇಶವಲ್ಲ. ಇಲ್ಲಿ ‘ಏಕ ಭಾಷೆ’ ಇಲ್ಲ ಮತ್ತು ಇರಲೂ ಸಾಧ್ಯವಿಲ್ಲ” ಎಂದಿದ್ದಾರೆ.

“ನಾವು ಭಾರತೀಯರು ಪರಿಗಣಿಸುವ ನಮ್ಮ ಮಾತೃಭಾಷೆಯನ್ನು ಲಕ್ಷಾಂತರ ಅಮಿತ್ ಶಾ ಬಂದರೂ ಬದಲಿಸಲು ಸಾಧ್ಯವಿಲ್ಲ. ರಾಜ್ಯ ಪ್ರಾಯೋಜಿತ ಹೇರಿಕೆಯಿಂದಲೂ, ಮೂರ್ಖ ಸುಳ್ಳುಗಳ ಮೂಲಕ ನಮ್ಮ ತಲೆಗಳನ್ನು ಕೊರೆದರೂ ಇದು ಸಾಧ್ಯವಿಲ್ಲ. ನನ್ನ ಮಾತೃಭಾಷೆ ಕನ್ನಡ. ಶಾ ನೂ ಹಿಂದಿ ಅಲ್ಲ” ಎಂದು ರಕ್ಷಿತ್ ಪೊನ್ನಾಥಪುರ ಎಂಬವರು ಟ್ವೀಟ್ ಮಾಡಿದ್ದಾರೆ.

“ನಿಮ್ಮ ಹಿಂದಿ ಸಾಮ್ರಾಜ್ಯಶಾಹಿ ವರ್ತನೆ ನಮ್ಮನ್ನು ಪ್ರತಿದಿನ ಕೊಲ್ಲುತ್ತಿದೆ. ಹಿಂದಿ ಹೊರತುಪಡಿಸಿ ಬೇರೆ ಭಾಷೆ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲಿ. ನಾನು ಹಿಂದಿಯೇತರರು ಒಂದೇ ಗುಂಡಿಗೆ ಸಾಯುತ್ತೇವೆ. ಆಗ ನಿಮ್ಮ ಒಂದೇ ಭಾಷೆಯ ದೇಶ ಕಟ್ಟಲು ಸುಲಭವಾಗಬಹುದು” ಎಂದು ಅರುಣ್ ಜಾವಗಲ್ ಎಂಬವರು ಟ್ವೀಟ್ ಮಾಡಿದ್ದಾರೆ.

#StopHindiImposition ಹ್ಯಾಶ್ ಟ್ಯಾಗ್ ನ ಕೆಲ ಟ್ವೀಟ್ ಗಳು ಈ ಕೆಳಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News