×
Ad

ಆಯುರ್ವೇದ ರಸಪ್ರಶ್ನಾ ಸ್ಪರ್ಧೆ: ಪ್ರತಿಮಾ- ಅರ್ಪಿತಾಗೆ ಪ್ರಶಸ್ತಿ

Update: 2019-09-14 20:37 IST

ಉಡುಪಿ, ಸೆ.14: ಉಡುಪಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮತ್ತು ಹಿಮಾಲಯ ಡ್ರಗ್ ಕಂಪನಿಯ ಸಹಯೋಗ ದೊಂದಿಗೆ ರಾಜ್ಯಮಟ್ಟದ ಆಯುರ್ವೇದ ರಸಪ್ರಶ್ನೆ ಕಾರ್ಯಕ್ರಮವನ್ನು ಇತ್ತೀಚೆಗೆ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಬೆಂಗಳೂರು, ಗದಗ ಸೇರಿದಂತೆ ರಾಜ್ಯದ ವಿವಿಧ ಆಯುರ್ವೇದ ಸಂಸ್ಥೆ ಗಳಿಂದ 8 ತಂಡಗಳು ಭಾಗವಹಿಸಿದ್ದು, ಉಡುಪಿ ತಂಡದ ಇಂಟರ್ನಿ ವೈದ್ಯ ರಾದ ಪ್ರತಿಮಾ ಪೌಡೆಲ್ ಹಾಗೂ ಅರ್ಪಿತ ಎಚ್.ಆರ್. ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಜಿ.ಶ್ರೀನಿವಾಸ ಆಚಾರ್ಯ, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಕ್ಷೇಮಪಾಲನಾಧಿ ಕಾರಿಗಳಾದ ಡಾ.ನಿರಂಜನ ರಾವ್, ಡಾ.ಸುಚೇತ ಕುಮಾರಿ, ಸಹಾಧಿಕಾರಿ ಗಳಾದ ಡಾ. ನಾಗರಾಜ್ ಪೂಜಾರಿ, ಡಾ.ವೀರಕುಮಾರ, ಕಲೆ ಮತ್ತು ಸಂಸ್ಕೃತಿ ವಿಭಾಗದ ಸಂಯೋಜಕ ಡಾ.ವಿಜಯೇಂದ್ರ ಭಟ್ ಉಪಸ್ಥಿತರಿದ್ದರು.

ಆಯುರ್ವೇದ ಆಸ್ಪತ್ರೆಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ಶುಭಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News