ಕಾಶ್ಮೀರದಲ್ಲಿ ಔಷಧಿ ಸಿಗದೆ ಸಾವು-ಬದುಕಿನ ಹೋರಾಟ ನಡೆಸುತ್ತಿರುವ ಹಿಮೋಫೀಲಿಯಾ ರೋಗಿಗಳು

Update: 2019-09-14 16:01 GMT

ಶ್ರೀನಗರ,ಸೆ.14: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ಧತಿಯ ನಂತರ ಹೇರಲಾಗಿರುವ ನಿರ್ಬಂಧದಿಂದಾಗಿ ಅಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಎದುರಾಗಿದ್ದು ಶ್ರೀ ಮಹಾರಾಜ ಹರಿಸಿಂಗ್ (ಎಸ್‌ಎಂಎಚ್‌ಎಸ್) ಆಸ್ಪತ್ರೆಯಲ್ಲಿ ಔಷಧಿ ಸಿಗದೆ ಹಿಮೋಫೀಲಿಯಾ ರೋಗಿಗಳು ಸಾಯುವ ಸ್ಥಿತಿ ಎದುರಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಿಮೋಫೀಲಿಯಾ ಒಂದು ಅಪರೂಪದ ವಂಶಾವಳಿ ರೋಗವಾಗಿದ್ದು ಇದರಲ್ಲಿ ರೋಗಿಯ ರಕ್ತ ನಿಧಾನಗತಿಯಲ್ಲಿ ಹೆಪ್ಪುಗಟ್ಟುವ ಕಾರಣ ರೋಗಿ ಅಧಿಕ ರಕ್ತಸ್ರಾವದ ಸಮಸ್ಯೆಯಿಂದ ಬಳಲುತ್ತಾನೆ. ಇದಕ್ಕೆ ನೀಡಲಾಗುವ ಔಷಧಿಯೂ ದುಬಾರಿಯಾಗಿದ್ದು ಒಂದು ಬಾರಿ ನೀಡುವ ಪ್ರಮಾಣಕ್ಕೆ 4,000ರೂ.ನಿಂದ 24,000ರೂ.ವರೆಗಿದೆ.

ಶ್ರೀನಗರದ ಸುತ್ತಮುತ್ತಲ ಪ್ರದೇಶದಲ್ಲಿ ಎಸ್‌ಎಂಎಚ್‌ಎಸ್‌ನ ಡೇಕೇರ್ ಕೇಂದ್ರದಲ್ಲಿ ಮಾತ್ರ ಹಿಮೋಫೀಲಿಯಾಕ್ಕೆ ಉಚಿತ ಔಷಧಿ ನೀಡಲಾಗುತ್ತದೆ. ದೂರದ ಜಿಲ್ಲೆಗಳಿಂದಲೂ ಹಿಮೋಫೀಲಿಯಾದಿಂದ ಬಳಲುತ್ತಿರುವವರು ಈ ಆಸ್ಪತ್ರೆಗೆ ಆಗಮಿಸಿ ಔಷಧಿ ಪಡೆಯುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ನಿಯೋಜಿಸಲಾಗಿರುವ ಸೇನಾಪಡೆಗಳು ಮತ್ತು ಹೇರಲಾಗಿರುವ ನಿರ್ಬಂಧವನ್ನು ಕೇಂದ್ರ ಸರಕಾರ ಇನ್ನೂ ವಾಪಸ್‌ಪಡೆದಿಲ್ಲ. ಇದರಿಂದಾಗಿ ಕಣಿವೆ ರಾಜ್ಯದ ಜನರ ಜೀವನ ದುಸ್ತರವಾಗಿದ್ದು ಮುಖ್ಯವಾಗಿ ಔಷಧಿಗಳ ಕೊರತೆಯಿಂದ ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News