​ಉಚ್ಚಿಲ ಸಮೀಪ ಬೋಟು ಅವಘಡ: 12 ಮೀನುಗಾರರ ರಕ್ಷಣೆ

Update: 2019-09-14 16:21 GMT

ಕಾಪು, ಸೆ.14: ಉಚ್ಚಿಲ ಸಮೀಪದ ಸಮುದ್ರದಲ್ಲಿ ಸೆ.13ರಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅವಘಡಕ್ಕೀಡಾದ ಬೋಟಿನಲ್ಲಿದ್ದ 12 ಮೀನುಗಾರರ್ನು ರಕ್ಷಿಸಿರುವ ಬಗ್ಗೆ ವರದಿಯಾಗಿದೆ.

ಉಚ್ಚಿಲದ ಅಶೋಕ್ ಪುತ್ರನ್ ಎಂಬವರ ಕರಿಯ ಜೋಡಿ ಎಂಬ ಹೆಸರಿನ ಬೋಟಿನಲ್ಲಿ 12 ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆ ತೆರಳಿದ್ದು, ತೀರ ದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಮೀನುಗಾರಿಕೆ ನಡೆಸುವ ವೇಳೆ ಬೋಟು ಅವಘಡಕ್ಕೀಡಾಗಿತ್ತೆನ್ನಲಾಗಿದೆ.

ಈ ಬಗ್ಗೆ ಮಾಹಿತಿ ತಿಳಿದ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸ್ಥಳೀಯ ಶಿವಪ್ರಸಾದ್ ಬೋಟು ಕೂಡಲೇ ಇವರ ರಕ್ಷಣೆಗೆ ಧಾವಿಸಿತ್ತು. ತಕ್ಷಣ ಅವ ಘಡಕ್ಕೀಡಾದ ಬೋಟಿನಲ್ಲಿದ್ದ 12 ಮೀನುಗಾರರನ್ನು ರಕ್ಷಿಸಲಾಯಿತು. ಬಳಿಕ ಬೋಟನ್ನು ಮಲ್ಪೆ ಬಂದರಿಗೆ ಎಳೆದು ತರಲಾಯಿತು ಎಂದು ಮೂಲಗಳು ತಿಳಿಸಿವೆ. ಈ ಅವಘಡದಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News