ಗುಜ್ಜರ್‌ಬೆಟ್ಟು ಅಂಬೇಡ್ಕರ್ ಸಮುದಾಯ ಭವನಕ್ಕೆ ಶಿಲಾನ್ಯಾಸ

Update: 2019-09-14 16:24 GMT

ಮಲ್ಪೆ, ಸೆ.14: ಪಡುತೋನ್ಸೆ ಗುಜ್ಜರ್‌ಬೆಟ್ಟುವಿನ ಅಂಬೇಡ್ಕರ್ ಸಮುದಾಯ ಭವನದ ನೂತನ ಕಟ್ಟಡದ ಶಿಲಾನ್ಯಾಸವನ್ನು ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಶುಕ್ರವಾರ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್ ಮದ್ವರಾಜ್, ದಲಿತರು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃಧ್ಧಿ ಹೊಂದಲು ಈ ಭವನವನ್ನು ಸದುಪಯೋಗ ಪಡೆದುಕೊಳ್ಳಬೇಕು. ದಲಿತ ಸಮಾಜ ಒಗ್ಗಟ್ಟುವಿಗೆ ಗುಜ್ಜರ್ ಬೆಟ್ಟು ರಾಜ್ಯಕ್ಕೆ ಮಾದರಿಯಾಗಬೇಕೆಂದರು.

ಮಾಜಿ ತಾಪಂ ಅಧ್ಯಕ್ಷೆ ವೆರೋನಿಕ ಕರ್ನೇಲಿಯೋ, ಕೆಮ್ಮಣ್ಣು ಗ್ರಾಪಂ ಅಧ್ಯಕ್ಷೆ ಫೌಜೀಯ ಸಾದಿಕ್, ಮಾಜಿ ಧರ್ಮದರ್ಶಿ ಸುಪ್ರಸಾದ್ ಶೆಟ್ಟಿ, ಗಣಪತಿ ಸಿ.ಎ ಬ್ಯಾಂಕಿನ ಅಧ್ಯಕ್ಷ ಸತೀಶ ಶೆಟ್ಟಿ, ಕಲ್ಯಾಣಪುರ ತಾಪಂ ಸದಸ್ಯೆ ಸುಲೋಚನ, ತೊನ್ಸೆ ಗ್ರಾಪಂ ಮಾಜಿ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಉಡುಪಿ ನಗರಸಭಾ ಮಾಜಿ ಸದಸ್ಯ ಗಣೇಶ್ ನೆರ್ಗಿ, ಗ್ರಾಪಂ ಸದಸ್ಯೆ ದಮಯಂತಿ ಟೀಚರ್, ದಸಂಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್, ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಲ್ಪೆ ಉಪಸ್ಥಿತರಿದರು.

ಸಮುದಾಯ ಭವನದ ಅಧ್ಯಕ್ಷ ಸುಂದರ್ ಗುಜ್ಜರ್‌ಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರ ಎಲ್.ಐ.ಸಿ ಸ್ವಾಗತಿಸಿದರು. ವಿಶ್ವನಾಥ್ ಜಿ. ವಂದಿಸಿದರು. ಸುಧಾಕರ್ ವಾಸ್ತರ್ ಕಾರ್ಯಕ್ರಮ ನಿರೂಪಿಸಿದರು.

ಶ್ರೀರಾಘವೇಂದ್ರ ಭಜನಾ ಮಂಡಳಿಯ ಆಶ್ರಯದಲ್ಲಿ ನಡೆಯುವ ಈ ಸಮುದಾಯ ಭವನಕ್ಕೆ ಸರಕಾರ 50 ಲಕ್ಷ ಮಂಜೂರು ಮಾಡಿದ್ದು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡದ ಜನೆಯನ್ನು ಹಮ್ಮಿಕೊಳ್ಳ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News