ಕಾಪು: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Update: 2019-09-14 16:25 GMT

ಕಾಪು, ಸೆ.14: ಮನೆಯ ಕಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಮೂಡಬೆಟ್ಟು ಗ್ರಾಮದ ಶಂಕರಪುರ ಎಂಬಲ್ಲಿ ನಡೆದಿದೆ.

ಶಂಕರಪುರದ ಶಂಕರ ಎಸ್. ಎಂಬವರು ಎರಡು ತಿಂಗಳ ಹಿಂದೆ ತನ್ನ ಹಾಗೂ ತನ್ನ ಪತ್ನಿ, ಮಗಳು ಮತ್ತು ತಾಯಿಯ 145.575 ಗ್ರಾಂ ತೂಕದ ಚಿನ್ನಾಭರಣವನ್ನು ಮನೆಯ ಕಪಾಟಿನ ಒಳಗಡೆ ಇಟ್ಟು ಬೀಗ ಹಾಕಿ ಕಪಾಟಿನ ಬೀಗವನ್ನು ಬೆಡ್ಡಿನ ಕೆಳಗೆ ಇಟ್ಟಿದ್ದು, ಸೆ.11ರಂದು ಸಂಜೆ 7:30 ಗಂಟೆಗೆ ಶಂಕರ್ ಅವರ ಪತ್ನಿ ಗಿರಿಜಾ ಕಪಾಟಿನ ಬೀಗ ತೆಗೆದು ನೋಡಿದಾಗ ಚಿನ್ನಾಭರಣ ಕಳವಾಗಿರುವುದು ಕಂಡುಬಂತೆನ್ನಲಾಗಿದೆ.

 2 ತಿಂಗಳ ಹಿಂದೆ ಶಂಕರ್ ಅವರ ತಾಯಿ ಮನೆಯಲ್ಲಿರುವ ವೇಳೆ ಇವರ ದೂರದ ಸಂಬಂಧಿ ನಿಶಾಂತ್ ಎಂಬಾತ ಮನೆಗೆ ಬಂದಿದ್ದು, ತಾಯಿ ಅಡುಗೆ ಮನೆಯಲ್ಲಿರುವಾಗ ಆತ ಕೋಣೆಗೆ ಹೋಗಿ ಬರುತ್ತಿದ್ದ ಎಂದು ದೂರಲಾಗಿದೆ. ಆತನೇ ಈ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ. ಕಳವಾದ ಚಿನ್ನಾಭರಣದ ಒಟ್ಟು ಮೌಲ್ಯ 4,80,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News