ಮಣಿಪಾಲ: ಹೊಸ ಬೆಳಕು ಅನಾಥಾಶ್ರಮದಲ್ಲಿ ಒಣಂ ಆಚರಣೆ
Update: 2019-09-14 22:02 IST
ಮಣಿಪಾಲ, ಸೆ.14: ಮಣಿಪಾಲ ಸರಳೆಬೆಟ್ಟು ಹೊಸಬೆಳಕು ಅನಾಥಾಶ್ರಮ ದಲ್ಲಿ ಒಣಂ ಹಬ್ಬವನ್ನು ಸೆ.13ರಂದು ಆಚರಿಸಲಾಯಿತು.
ಕಾರ್ಯಕ್ರಮವನ್ನು ಮಮ್ಮಿ ಆಂಡ್ ಮೀ ಇದರ ಸಂಸ್ಥಾಪಕಿ ಎ.ಆರ್.ಪಿ. ಪ್ಲಾರ್ ಉದ್ಘಾಟಿಸಿ ಓಣಂ ಬಗ್ಗೆ ಮಾಹಿತಿ ನೀಡಿದರು.
ರಾಮಚಂದ್ರ ಠಾಕೂರ್ ರಾಮಾನಂದ ಸಮಂತ್, ಕಿರಣ್, ಹೊಸಬೆಳಕು ಸಂಸ್ಥೆಯ ತನುಲಾ ತರುಣ್, ವಿನಯ ಉಪಸ್ಥಿತರಿದ್ದರು. ಕೇರಳದ ಹೆಸರಾಂತ ತಿಂಡಿಯಾದ ಪಟ್ಟುವನ್ನು ಕಿರಣ್ ತಯಾರಿಸಿ ಆಶ್ರಮದ ನಿವಾಸಿಗಳಿಗೆ ಹಂಚಿದರು.