×
Ad

ನಾರಾಯಣಗುರು ಎಲ್ಲಾ ಜಾತಿಗಳಿಗೂ ಗುರು: ಜಯನ್ ಮಲ್ಪೆ

Update: 2019-09-14 22:04 IST

ಉಡುಪಿ, ಸೆ.14: ಈ ನಾಡಿನ ದುರ್ಬಲ ಜನಾಂಗದ ಆತ್ಮಬಲದ ಪ್ರತೀಕ ವಾಗಿ ಹುಟ್ಟಿ ಬಂದ ನಾರಾಯಣಗುರು, ಮನುಕುಲದ ಬೆಳಕು. ಸಮಾನತೆ ಹಾಗೂ ಸಹೋದರತೆಗಳು ಬದುಕಿನಾಧಾರವಾಗಬೇಕೆಂಬ ಇವರ ಸಂದೇಶ ಎಲ್ಲಾ ಜಾತಿಗೆ ಗುರುವಿನಂತೆ ಎಂದು ದಲಿತ ಚಿಂತಕ ಹಾಗೂ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಶುಕ್ರವಾರ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಬನ್ನಂಜೆಯ ನಾರಾಯಣಗುರು ರಿಕ್ಷಾ ಚಾಲಕ ಮಾಲಕರ ಸಂಘ ಏರ್ಪಡಿಸಿದ ಶ್ರೀ ನಾರಾಯಣಗುರುಗಳ 165ನೇ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶೋಷಕರ ಪರ ಹೋರಾಡಿದ ಎಲ್ಲಾ ದಾರ್ಶನಿಕರನ್ನೂ ಆಯಾಯ ಜಾತಿಗೆ ಕಟ್ಟುಹಾಕುವ ಮೂಲಕ ಪಟ್ಟಭದ್ರ ಹಿತಾಸಕ್ತಿಗಳು ದಲಿತ ಮತ್ತು ಹಿಂದುಳಿದವರ ಮೆದುಳಿನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ಜಯನ್, ಇಂದು ರಿಕ್ಷಾಚಾಲಕರು ಮಾತ್ರ ನಾರಾಯಣಗುರುಗಳ ಸಂದೇಶದಂತೆ ಜಾತಿ, ಮತ, ಧರ್ಮ ನೋಡದೆ ಪ್ರಯಾಣಿಕರನ್ನು ಗುರಿ ಮುಟ್ಟಿಸುಲ್ಲಿ ಯಶಸ್ವಿ ಯಾಗಿದ್ದಾರೆ ಎಂದರು.

ನಾರಾಯಣ ಟಿಟ್ಪಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜ್ವಾನ್ ಮಿಸ್ಕಿತ್, ದಲಿತ ಮುಖಂಡ ಉಮೇಶ್ ಅಂಬಲಪಾಡಿ, ಮೋಹನ್‌ದಾಸ್ ಚಿಟ್ಪಾಡಿ, ಸಂದೀಪ್, ಸದಾಶಿವ ಕೆ, ಭಾಸ್ಕರ್ ಬನ್ನಂಜೆ, ಪ್ರಶಾಂತ್, ಜಯ, ರಮೇಶ್, ಅಶ್ವಥ್ ಕುಮಾರ್, ಪ್ರಕಾಶ್ ಕೆ ಉಪಸ್ಥಿತರಿದ್ದರು.

ಪವನ್ ಜಿ.ಪೂಜಾರಿ ಸ್ವಾಗತಿಸಿ, ಅಬ್ದುಲ್ ಫಾಝಿಲ್ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News