ಏರ್ ರೈಫಲ್ ಶೂಟಿಂಗ್ ಸ್ಪರ್ಧೆ: ಮಂಗಳೂರಿನ ನಿಹಾಲ್ ಸುವರ್ಣ ರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2019-09-14 16:45 GMT

ಮಂಗಳೂರು, ಸೆ.14: ಕೇರಳದ ಇಡುಕ್ಕಿಯಲ್ಲಿ ಆರು ರಾಜ್ಯಗಳ ಸ್ಪರ್ಧಿಗಳು ಪ್ರತಿನಿಧಿಸಿದ ಸೌತ್‌ರೆನ್ ಪ್ರಿ-ನ್ಯಾಷನಲ್‌ನ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯ ಅರ್ಹತಾ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ನಿಹಾಲ್ ಸುವರ್ಣ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ, ತಮಿಳುನಾಡು ರಾಜ್ಯಗಳನ್ನು ಒಳಗೊಂಡ ಸೌತ್ ರೆನ್ ಪ್ರಿ-ನ್ಯಾಷನಲ್‌ನ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯ ಅರ್ಹತಾ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಮಂಗಳೂರು ಶೂಟಿಂಗ್ ಕ್ಲಬ್ ಇದರ ಸದಸ್ಯರಾದ ಹಾಗೂ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾದ ನಿಹಾಲ್ ಸುವರ್ಣ ಅವರು ಅತ್ಯುನ್ನತ ಪ್ರದರ್ಶನ ನೀಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ನಿಹಾಲ್ ಅವರು ಡಿಸೆಂಬರ್‌ನಲ್ಲಿ ದಿಲ್ಲಿಯಲ್ಲಿ ನಡೆಯುವ 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಮಂಗಳೂರು ಏರ್ ರೈಫಲ್ ಕ್ಲಬ್‌ನಿಂದ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಇವರು ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದ ಮಿತ್ತ ಕಟ್ಟ ನಿವಾಸಿ ನವೀನ್ ಸುವರ್ಣ ಹಾಗೂ ಸ್ನೇಹ ಇವರ ಸುಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News