×
Ad

ದುಬೈಯಲ್ಲಿ 5 ವರ್ಷದ ಮಗುವಿನ ಮೇಲೆ ದೌರ್ಜನ್ಯ: ಭಾರತೀಯನಿಗೆ 6 ತಿಂಗಳು ಜೈಲು

Update: 2019-09-14 22:32 IST

ದುಬೈ, ಸೆ. 14: ದುಬೈಯಲ್ಲಿ 5 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 33 ವರ್ಷ ಪ್ರಾಯದ ಭಾರತೀಯನೊಬ್ಬನಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಹಾಗೂ ಶಿಕ್ಷೆಯ ಬಳಿಕ ಆತನನ್ನು ಗಡಿಪಾರು ಮಾಡಲಾಗುವುದು ಎಂದು ಮಾಧ್ಯಮವೊಂದು ಶನಿವಾರ ವರದಿ ಮಾಡಿದೆ.

“ನಾನು ಮನೆಯಲ್ಲಿ ಆಟವಾಡುತ್ತಿದ್ದಾಗ ಆರೋಪಿಯು ನನ್ನನ್ನು ಕರೆದು ಅನುಚಿತವಾಗಿ ಸ್ಪರ್ಶಿಸಿದನು” ಎಂದು ಭಾರತೀಯ ಮಗು ಪೊಲೀಸರಿಗೆ ಹೇಳಿದೆ ಎಂದು ‘ಗಲ್ಫ್ ನ್ಯೂಸ್’ ಹೇಳಿದೆ.

‘‘ಬಳಿಕ ನನ್ನ ಮಾವ ಬಂದು ಅವನನ್ನು ನನ್ನಿಂದ ದೂರ ತಳ್ಳಿದರು’’ ಎಂದು ಮಗು ಹೇಳಿದೆ.

ಮಗು ತನ್ನ ತಂದೆ, ತಾಯಿ ಮತ್ತು ಮಾವನ ಜೊತೆಗೆ ದುಬೈಯಲ್ಲಿ ವಾಸಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News