×
Ad

ಮನೆಗೆ ನುಗ್ಗಿ ನಗ-ನಗದು ಕಳವು ಪ್ರಕರಣ: ಆರೋಪಿ ಸೆರೆ

Update: 2019-09-14 22:58 IST

ಬೆಳ್ತಂಗಡಿ: ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪಿಲಾತ ಬೆಟ್ಟು  ಗ್ರಾಮದ ಬೆಂಚಿನ ನಡ್ಕ ಮನೆ ಎಂಬಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಪೋಲೀಸರು ಬಂಧಿಸಿದ್ದು ಆತನಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿ ಪಿಲಾತಬೆಟ್ಟು  ಗ್ರಾಮ ಬೆಂಚಿನ ನಡ್ಕ  ನಿವಾಸಿ ವಿಕೇಶ್ ಕುಮಾರ್ (23) ಎಂದು ಗುರುತಿಸಲಾಗಿದೆ. ಸ್ಥಳೀಯ ನಿವಾಸಿ ಅಂಜಲಿ ಮಸ್ಕರೇನಸ್  ಎಂಬವರ ಮನೆಯಲ್ಲಿ ಸುಮಾರು 51 ಗ್ರಾಂ ತೂಕದ ಚಿನ್ನದ ವಿವಿಧ ಆಭರಣಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಅವರ ದೂರಿನಂತೆ ಪೂಂಜಾಲಕಟ್ಟೆ  ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಹಾಗೂ ಪೂಂಜಾಲಕಟ್ಟೆ  ಪಿಎಸೈ ಸೌಮ್ಯ ಜೆ ಅವರ ನೇತೃತ್ವದ ತಂಡ ನಡೆಸಿದ ತನಿಖೆಯಲ್ಲಿ ಆರೋಪಿ ವಿಕೇಶ್ ಕುಮರ್ ನನ್ನು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News