ರೈಲಿನಲ್ಲಿ ಮಹಿಳೆಯ ಹೆರಿಗೆ ನಡೆಸಿದ ನರ್ಸ್

Update: 2019-09-14 17:49 GMT

ಮುಂಬೈ, ಸೆ.14: ನರ್ಸ್‌ವೊಬ್ಬರು ಚಲಿಸುವ ರೈಲಿನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಮಗು ಹೆರಲು ನೆರವಾಗಿದ್ದು ಮಾತ್ರವಲ್ಲ ಆಕೆಯನ್ನು ಅಂಧೇರಿ ರೈಲ್ವೇ ವೈದ್ಯ ತಂಡದ ಕೈಗೆ ಒಪ್ಪಿಸಿರುವುದು ಎಲ್ಲರಿಂದಲೂ ಶ್ಲಾಘನೆಗೆ ಪಾತ್ರವಾಗಿದೆ.

ಸೈಫಿ ಆಸ್ಪತ್ರೆಯ ತೀವ್ರ ನಿಗಾ ಘಟಕದ ನರ್ಸಿಂಗ್ ಅಧಿಕಾರಿ ಅಸ್ಮಿತಾ ಅವರು ಸಹಪ್ರಯಾಣಿಕೆ ಹೆಣ್ಣು ಮಗುವಿಗೆ ಜನ್ಮ ನೀಡಲು ನೆರವಾಗಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಆಸ್ಪತ್ರೆ, ಅಸ್ಮಿತಾ ಅವರ ಸಮಯೋಚಿತ ಮಧ್ಯಸ್ಥಿಕೆ ಮತ್ತು ಧೈರ್ಯವನ್ನು ನಾವು ಶ್ಲಾಘಿಸುತ್ತೇವೆ. ನಿಮ್ಮಂತಹ ನರ್ಸ್‌ಗಳು ಸಮಾಜದಲ್ಲಿ ನರ್ಸ್‌ಗಳ ಘನತೆಯನ್ನು ಎತ್ತಿಹಿಡಿಯುತ್ತಾರೆ. ನರ್ಸ್ ಎಂಬ ಪದದ ನಿಜವಾದ ಅರ್ಥವನ್ನು ಜಗತ್ತಿಗೆ ತಿಳಿಸಿದ ಕಾರಣಕ್ಕೆ ಧನ್ಯವಾದಗಳು ಎಂದು ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News