ಕೆಸಿಎಫ್ ಅಂತರ್ ರಾಷ್ಟ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2019-09-15 13:39 GMT
ಹಾಜಿ ಶೇಖ್ ಬಾವ, ಖಮರುದ್ದೀನ್ ಗೂಡಿನಬಳಿ, ಹಮೀದ್ ಸಅದಿ
 

ಮಂಗಳೂರು: ಅನಿವಾಸಿ ಕನ್ನಡಿಗರ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್.) ಅಂತಾರಾಷ್ಟ್ರೀಯ ಮಂಡಳಿಯ ವಾರ್ಷಿಕ ಮಹಾಸಭೆಯು ಮಂಗಳೂರು ಬಲ್ಮಠ  ಸಹೋದಯ ಸಭಾಂಗಣದಲ್ಲಿ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಂದಿನ ಎರಡು ವರ್ಷಗಳಿಗೆ ಅಧ್ಯಕ್ಷರಾಗಿ ಡಾ. ಶೇಖ್ ಬಾವಾ ಮಂಗಳೂರು (ಯು.ಎ.ಇ.) ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಖಮರುದ್ದೀನ್ ಗೂಡಿನಬಳಿ (ಸೌದಿ ಅರೇಬಿಯಾ), ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಸ'ಅದಿ ಈಶ್ವರಮಂಗಲ (ಅಬುಧಾಬಿ) ಅವರನ್ನು ಆಯ್ಕೆ ಮಾಡಲಾಯಿತು. 

ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಎಸ್. ಪಿ.ಹಂಝ ಸಖಾಫಿ ಬಂಟ್ವಾಳ, ಕಾರ್ಯದರ್ಶಿಯಾಗಿ ಮಿತ್ತೂರು ಉಮರ್ ಸಖಾಫಿ, ಸಂಘಟನಾ ವಿಭಾಗ ಅಧ್ಯಕ್ಷರಾಗಿ ಹಮೀದ್ ಪಿ.ಎಂ.ಎಚ್.ಈಶ್ವರಮಂಗಲ ಅಬುಧಾಬಿ, ಕಾರ್ಯದರ್ಶಿಯಾಗಿ ಹುಸೈನ್ ಎಮ್ಮೆಮಾಡು ಕುವೈತ್, ಆಡಳಿತ ವಿಭಾಗದ ಅಧ್ಯಕ್ಷರಾಗಿ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್, ಕಾರ್ಯದರ್ಶಿಯಾಗಿ ಮುಹಮ್ಮದ್ ಇಕ್ಬಾಲ್ ಬರಕಾ ಒಮಾನ್, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಮುಸ್ಲಿಯಾರ್ ಮಡಿಕೇರಿ, ಬಹರೈನ್, ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಇಹ್ಸಾನ್ ವಿಭಾಗ ಅಧ್ಯಕ್ಷರಾಗಿ ಹಾಜಿ‌ ಅಬೂಬಕರ್ ರೈಸ್ಕೋ ಪಡುಬಿದ್ರೆ, ಕಾರ್ಯದರ್ಶಿಯಾಗಿ ಅಬ್ದುಲ್ ರಹೀಂ ಸ'ಅದಿ ಪಾಣೆಮಂಗಳೂರು, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಬಜಪೆ, ಕಾರ್ಯದರ್ಶಿಯಾಗಿ ಪಿ.ಪಿ.ನಝೀರ್ ಕಾಶಿಪಟ್ನ, ಇಶಾರಾ ಕೋ-ಆರ್ಡಿನೇಟರ್ ಹಾಜಿ ಕೆ.ಕೆ.ಉಸ್ಮಾನ್ ನಾಪೋಕು (ಯು.ಎ.ಇ.) ಇವರುಗಳನ್ನು  ಆಯ್ಕೆ ಮಾಡಲಾಯಿತು.

ಸೌದಿ ಅರೇಬಿಯಾ, ಯು.ಎ.ಇ., ಕುವೈತ್, ಕತರ್, ಒಮನ್, ಬಹರೈನ್ ಹಾಗೂ ಮಲೇಷಿಯಾ ರಾಷ್ಟ್ರಗಳ ಪ್ರತಿನಿಧಿಗಳು  ಭಾಗವಹಿಸಿದ್ದರು.

ಪಿ.ಎಂ.ಎಚ್. ಅಬ್ದುಲ್ ಹಮೀದ್ ಸ್ವಾಗತಿಸಿ, ಖಮರುದ್ದೀನ್ ಗೂಡಿನಬಳಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News