ಹಾವುಗಳನ್ನು ಹಿಡಿದು ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದ ಪಾಕ್ ಗಾಯಕಿಗೆ 2 ವರ್ಷ ಜೈಲು

Update: 2019-09-15 09:00 GMT

ಇಸ್ಲಾಮಾಬಾದ್, ಸೆ.15: ಸ್ಥಳೀಯ ವನ್ಯಜೀವಿ ಸಂರಕ್ಷಣಾ ಸಂಸ್ಥೆಯೊಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಪರ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದ, ಕೈಯಲ್ಲಿ ದೈತ್ಯ ಹಾವುಗಳನ್ನು ಹಿಡಿದು ಇದನ್ನು ಮೋದಿ ಮೇಲೆ ಛೂ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಪಾಕಿಸ್ತಾನದ ಪಾಪ್ ಗಾಯಕಿ ಈಗ ಜೈಲುಶಿಕ್ಷೆಗೆ ಗುರಿಯಾಗಿದ್ದಾಳೆ.

ಟಿವಿ ನಿರೂಪಕಿ ಮತ್ತು ಪಾಪ್ ಗಾಯಕಿ ರಬಿ ಪಿರ್ಝಾದಾಗೆ ಇದೀಗ ದಂಡ ಹಾಗೂ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದತಿ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿತ್ತು.

ಈ ಗಾಯಕಿಯ ಯುಟ್ಯೂಬ್ ಚಾನಲ್‍ನಲ್ಲಿ ಸೆಪ್ಟೆಂಬರ್ 2ರಂದು ವಿಡಿಯೊ ಪೋಸ್ಟ್ ಮಾಡಲಾಗಿದ್ದು, ಸ್ಥಳೀಯ ಟಿವಿಗಳು ಕೂಡಾ ಇದನ್ನು ಪ್ರಸಾರ ಮಾಡಿದ್ದವು. ಕಾಶ್ಮೀರಿಗಳಿಗೆ ಮೋದಿ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದ ಪಿರ್ಝಾದಾ, "ನನ್ನ ಸರೀಸೃಪ ಮಿತ್ರರು ಮೋದಿಗೆ ವಿಶೇಷ ಉಡುಗೊರೆಗಳಾಗಲಿವೆ" ಎಂದಿದ್ದಳು.

"ನಿಮಗಾಗಿ ಏನು ಸಿದ್ಧಪಡಿಸಿದ್ದೇನೆ ನೋಡಿ, ಆದ್ದರಿಂದ ನರಕದಲ್ಲಿ ಸಾಯಲು ಸಜ್ಜಾಗಿ. ಓಕೆ? ನನ್ನ ಈ ಸ್ನೇಹಿತರು ನಿಮ್ಮ ಮೇಲೆ ಹಬ್ಬ ಮಾಡಲಿದ್ದಾರೆ" ಎಂದು ಹೇಳಿ ವಿಷಸರ್ಪವನ್ನು ಪ್ರದರ್ಶಿಸಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News