ಫುಟ್ಬಾಲ್ ನಲ್ಲಿ ಆಸಕ್ತಿ ತೋರಿಸುತ್ತಿರುವ ಜೂನಿಯರ್ ಮೆಸ್ಸಿ

Update: 2019-09-15 09:10 GMT

ಐರಿಸ್, ಸೆ.15: ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ವಿಶ್ವಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು.  ಕಳೆದ ಹತ್ತು ವರ್ಷಗಳಿಂದ ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡೊ ಅವರೊಂದಿಗೆ ಫುಟ್ಬಾಲ್ ಜಗತ್ತಿನಲ್ಲಿ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಮೆಸ್ಸಿ ಅವರ ಮಗ ಇದೀಗ ಫುಟ್ಟಾಲ್ ನಲ್ಲಿ ಆಸಕ್ತಿ ತೋರಿಸಿದ್ದಾನೆ. ಮೆಸ್ಸಿಯ ಮಗ ಮಾಟಿಯೊ, ತನ್ನ ತಂದೆಯ ಫುಟ್ಬಾಲ್ ಪ್ರತಿಭೆಯನ್ನು ಆನುವಂಶಿಕವಾಗಿ ಪಡೆದಿರುವುದನ್ನು ತೋರಿಸಿದ್ದಾನೆ. ಫುಟ್ಬಾಲ್ ನ ತಂತ್ರಗಳನ್ನು ಆತ  ಕಲಿಯುತ್ತಿದ್ದಾನೆ. ಮೆಸ್ಸಿಯ ಪತ್ನಿ ಆಂಟೊನೆಲಾ ರೊಕುಝೊ ಇನ್ಸ್ಟಾಗ್ರಾಮ್ ನಲ್ಲಿ  ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಾಲ್ಕರ ಹರೆಯದ  ಮಾಟಿಯೊ ಪೆನಾಲ್ಟಿ ತೆಗೆದುಕೊಂಡು ಬಾರ್ಸಿಲೋನಾದ ಸೂಪರ್ ಸ್ಟಾರ್ ನಂತೆ ಸಂಭ್ರಮಿಸುತ್ತಿದ್ದಾನೆ.

ಇದೇ ವೇಳೆ ಬೊರುಸ್ಸಿಯಾ ಡಾರ್ಟ್ಮಂಡ್ ವಿರುದ್ಧ ಮಂಗಳವಾರ ನಡೆಯುವ ಚಾಂಪಿಯನ್ಸ್ ಲೀಗ್ ಹಣಾಹಣಿಗೆ ಮೆಸ್ಸಿ ಅನುಮಾನ ವ್ಯಕ್ತಪಡಿಸಿದ್ದಾರೆ, ಏಕೆಂದರೆ ಅವರು ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಕೋಚ್ ಅರ್ನೆಸ್ಟೊ ವಾಲ್ವರ್ಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News