ಯುರೋಪ್ ನಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ಹೈ ಜಂಪ್ ನಲ್ಲಿ ಸುಳ್ಯದ ಸಂಶೀರ್ ಪ್ರಥಮ

Update: 2019-09-15 10:12 GMT

ಸುಳ್ಯ: ಮುಂಬೈ ರೈಲ್ವೇಯಲ್ಲಿ ಕಮರ್ಶಿಯಲ್ ವಿಭಾಗದಲ್ಲಿ ಉದ್ಯೋಗಿಯಾಗಿರುವ ಸಂಶೀರ್ ಅವರು ಯುರೋಪ್ ನಲ್ಲಿ ನಡೆದ ಅಂತರ್ ರಾಷ್ಟ್ರೀಯ ಮಟ್ಟದ ವರ್ಲ್ಡ್ ರೈಲ್ವೇ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಹೈಜಂಪ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಸುಳ್ಯದ ಜಯನಗರ ನಿವಾಸಿ ಸಂಶೀರ್ ಅವರು ಸೆ.11ರಿಂದ ನಾಲ್ಕು ದಿನಗಳ ಕಾಲ ಯುರೋಪ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ರೈಲ್ವೇ ವಿಭಾಗದಲ್ಲಿ ಕೆಲಸ ಮಾಡುವ ಮಂದಿಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟ ನಡೆಯುತ್ತದೆ. ಜಪಾನ್, ಫ್ರಾನ್ಸ್ ಸೇರಿದಂತೆ 8 ದೇಶಗಳಿಂದ ರೈಲ್ವೇ ಉದ್ಯೋಗಿಗಳು ಆಗಮಿಸುತ್ತಾರೆ. ಸಂಶೀರ್ ಅವರು ಹೈಜಂಪ್ ಹಾಗೂ ಲಾಂಗ್ ಜಂಪ್ ನಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ತಲುಪುವಾಗ  ವಿಳಂಬವಾದ್ದರಿಂದ ಲಾಂಗ್ ಜಂಪ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇವರು ಸುಳ್ಯ ಜಯನಗರದ ಇಬ್ರಾಹಿಂ ಅವರ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News