ಕಾಸ್ಕ್ ನರಿಂಗಾನ ವತಿಯಿಂದ ರಕ್ತದಾನ ಶಿಬಿರ

Update: 2019-09-15 13:13 GMT

ಮಂಗಳೂರು: ಕೊಲ್ಲರಕೋಡಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ನರಿಂಗಾನ ಮತ್ತು ಬ್ಲಡ್ ಡೋನರ್ಸ್  ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದೊಂದಿಗೆ ರಕ್ತದಾನ ಶಿಬಿರವು ಕಾಸ್ಕ್ ನರಿಂಗಾನ ಅಧ್ಯಕ್ಷ ಸಲಾಂ ಎಂ.ಎಚ್  ಅಧ್ಯಕ್ಷತೆಯಲ್ಲಿ ಕೊಲ್ಲರ ಕೋಡಿ ಶಾಲಾ ವಠಾರದಲ್ಲಿ ನಡೆಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ  ಆಗಮಿಸಿ ಮಾತನಾಡಿದ  ಬ್ಲಡ್ ಡೋನರ್ಸ್ ಮಂಗಳೂರು ತಂಡದ ಉಪಾಧ್ಯಕ್ಷ ಸಲಾಂ ಚೊಂಬುಗುಡ್ಡೆ, ಹನಿ ಹನಿ ಗೂಡಿದರೆ ಹಳ್ಳ ಎಂಬಂತೆ ಒಂದೆರಡು ಸ್ನೇಹಿತರು ಕಟ್ಟಿಕೊಂಡ ಬ್ಲಡ್ ಡೋನರ್ಸ್ ಮಂಗಳೂರು ತಂಡವು ಸದಸ್ಯರೆಲ್ಲರ ಸಹಕಾರದಿಂದ ಶಿಬಿರಗಳ ಸಂಖ್ಯೆ 200ರ ಗಡಿ ದಾಟಿದೆ. ಅದೇ ರೀತಿ ಕೊಲ್ಲರಕೋಡಿಯಂತಹ ಊರಲ್ಲಿ ಕೂಡ ಯುವ ಶಕ್ತಿಗಳು ಇಂದು ಆಯೋಜಿಸಿದಂತಹ ರಕ್ತದಾನ  ಶಿಬಿರಗಳನ್ನು ಇನ್ನು ಮುಂದಕ್ಕೂ ನಡೆಸಿಕೊಂಡು ಬರುವಂತೆ ಶುಭಹಾರೈಸಿದರು.

ಬ್ಲಡ್ ಡೊನೊರ್ಸ್ ಮಂಗಳೂರು ಇದರ ಕಾರ್ಯನಿರ್ವಾಹಕ ಹಕೀಮ್ ಕೆ.ಸಿ ರೋಡ್, ಸಿರಾಜ್ ಪಜೀರ್, ಹಮೀದ್ ಪಜೀರ್, ಕಾಸ್ಕ್ ನರಿಂಗಾನ ಉಪಾಧ್ಯಕ್ಷ ಅಶ್ರಫ್ ಎಸ್ ಎಚ್, ಸಲಹೆಗಾರ  ಮುಸ್ತಫಾ ಪಿ ಎಂ, ಕೋಶಾಧಿಕಾರಿ ಹನೀಫ್ ಗುಳಿಮನೆ, ಸದಸ್ಯರಾದ ಇಕ್ಬಾಲ್ ಎಸ್ ಎಚ್, ಉಸ್ಮಾನ್ ಕೆ ಎಂ,  ರಿಯಾಝ್ ಪಲ್ಲ, ಸಾಜಿದ್, ನಿಝಾಮ್ ಎಂ ಬಿ, ಫೈಝಲ್, ನೌಫಲ್, ಮುಸ್ತಫಾ ಎನ್ ಎಂ, ಸಾಹಿಲ್, ಯೂಸುಫ್ ಹೈದರ್, ನಿಝಾಮ್ ಎಂ ಜಿ, ಸೋಶಿಯಲ್ ಅಚಿವೆಮೆಂಟ್ ಫೋರಮ್ ಇದರ ಕೋಶಾಧಿಕಾರಿ ಪಿ ಐ ಮೊಯಿದಿನ್, ಸಮಾಜ ಸೇವಕರಾದ ಪ್ರೇಮಾನಂದ ರೈ ನೆತ್ತಿಲ ಹಾಗು ರಝಾಕ್ ಮೊಂಟೆಪದವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News