ಹಿಂದಿ ಭಾಷೆಗೆ ದೇಶವನ್ನು ಒ್ಗೂಡಿಸುವ ಶಕ್ತಿ: ಪುರೋಬಿ ಭಂಡಾರಿ

Update: 2019-09-15 12:36 GMT

ಉಡುಪಿ, ಸೆ.15: ಹಿಂದಿ ಭಾಷೆಗೆ ಇಡೀ ದೇಶದ ಜನತೆಯನ್ನು ಒಗ್ಗೂಡಿ ಸುವ ಶಕ್ತಿ ಇದೆ ಎಂದು ಉಡುಪಿ ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಹಿಂದಿ ವಿಭಾಗದ ಉಪನ್ಯಾಸಕಿ ಪುರೋಬಿ ಎ.ಭಂಡಾರಿ ಹೇಳಿದ್ದಾರೆ.

ಉಡುಪಿ ಹಿಂದಿ ಪ್ರಚಾರ ಸಮಿತಿ ಆಶ್ರಯದಲ್ಲಿ ನಗರದ ಟಿ.ಎ.ಪೈ ಹಿಂದಿ ಭವನದಲ್ಲಿ ಶನಿವಾರ ಆಯೋಜಿಸಲಾದ ಹಿಂದಿ ದಿವಸ ಆಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡುತಿದ್ದರು.

2001ರ ಸರ್ವೇಯ ಪ್ರಕಾರ ಹಿಂದಿ ಭಾರತ ದೇಶದಲ್ಲಿ ಅತೀ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದ್ದು, ವಿಶ್ವದ ನಾಲ್ಕನೇ ಭಾಷೆಯಾಗಿ ಗುರುತಿಸಿ ಕೊಂಡಿದೆ. ದೇಶದಲ್ಲಿ ಇಂಗ್ಲಿಷ್ ಮಾತನಾಡಲು ಬಾರದವರು ನಂತರದ ಆಯ್ಕೆ ಮಾಡಿಕೊಳ್ಳುವುದೇ ಹಿಂದಿ ಭಾಷೆ. ಇದು ಹೃದಯದ ಭಾಷೆಯಾಗಿದ್ದು, ಅದನ್ನು ಮಾತನಾಡುವ ಮೂಲಕ ಅಭಿವ್ಯಕ್ತಿಗೊಳಿಸಬೇಕು ಎಂದರು
ಪ್ರಸ್ತುತ ಭಾಷಾ ಸರ್ವೇ ನಡೆದರೆ ಹಿಂದಿ ದೇಶದ ಏಕೈಕ ಭಾಷೆಯಾಗಿ ಹೊರಹೊಮ್ಮಲಿದೆ. ಆದರೆ ಇದಕ್ಕೆ ಆಡಳಿತ ವರ್ಗ ಮನಸ್ಸು ಮಾಡಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ, ವರಿಷ್ಠ ಹಿಂದಿ ಪ್ರಚಾರಕ ಗೋಪಾಲ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಹಿಂದಿ ಪ್ರಚಾರ ಸಮಿತಿಯ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಸಮಿತಿಯ ಗೌರವ ಕಾರ್ಯದರ್ಶಿ ಡಾ.ಎಸ್.ಆರ.ಶೇಟ್ ಸ್ವಾಗತಿಸಿದರು. ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಮುಕ್ತಾ ಶೆಣೈ ಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News