ಮ್ಯಾನ್ಮಾರ್ ಇಂಟರ್ ನ್ಯಾಶನಲ್ ಟೂರ್ನಿ ಗೆದ್ದ ಭಾರತದ ಧರ್ಮಮೇರ್‌

Update: 2019-09-15 14:03 GMT

ಯಾಂಗನ್, ಸೆ.15: ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಇಂಡೋನೇಶಿಯಾದ ಕರೋನೊ ಕರೋನೊ ಎದುರು ಮೂರು ಸೆಟ್‌ಗಳ ಹೋರಾಟದಲ್ಲಿ ಜಯಿಸಿದ ಭಾರತದ ಬ್ಯಾಡ್ಮಿಂಟನ್ ಆಟಗಾರ ಕೌಶಲ್ ಧರ್ಮಮೇರ್ ಮ್ಯಾನ್ಮಾರ್ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಕಳೆದ ವರ್ಷ ಹಟ್ಝೋರ್ ಇಂಟರ್‌ನ್ಯಾಷನಲ್ ಟೂರ್ನಿಯಲ್ಲೂ ಪ್ರಶಸ್ತಿ ಗೆದ್ದಿದ್ದ 23 ವರ್ಷದ ಕೌಶಲ್ ಮ್ಯಾನ್ಮಾರ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 18-21, 21-14, 21-11 ಸೆಟ್‌ಗಳಿಂದ ಗೆಲುವು ಸಾಧಿಸಿದರು.

ಗಾಯದ ಸಮಸ್ಯೆಯಿಂದ ಕಳೆದೆರಡು ವರ್ಷ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿರುವ ಕೌಶಲ್ ಈಗ ವಿಶ್ವದ 187ನೇ ಶ್ರೇಯಾಂಕಿತ ಆಟಗಾರನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News