ಎಂಐಟಿಇ: ವಾರ್ಷಿಕ ಚಟುವಟಿಕೆ ಉದ್ಘಾಟನಾ ಸಮಾರಂಭ

Update: 2019-09-15 15:01 GMT

ಮಂಗಳೂರು, ಸೆ.15: ಮೂಡುಬಿದಿರೆಯಲ್ಲಿನ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ (ಎಂಐಟಿಇ) ಕಾಲೇಜಿನಲ್ಲಿ ಮೆಕೆಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ವಾರ್ಷಿಕ ಚಟುವಟಿಕೆಯ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಹೈಡಾಕ್ ಸಂಸ್ಥೆ ಮಾರಾಟ ಮುಖ್ಯಸ್ಥ ಚೇತನ್ ರಾಜದೇವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮೆಕೆಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಉತ್ತಮ ಅವಕಾಶಗಳಿವೆ. ವಿದ್ಯಾರ್ಥಿಗಳು ಕಲಿಕೆಯನ್ನು ಕೇವಲ ತಮ್ಮ ಆಸಕ್ತ ಕ್ಷೇತ್ರಗಳಿಗೆ ಮೀಸಲಿಡದೆ, ಅದಕ್ಕೆ ಪೂರಕವಾದ ನೂತನ ಸಾಫ್ಟ್‌ವೇರ್‌ಗಳನ್ನು ಕಲಿಯಲು ಹಿಂದೇಟು ಹಾಕಬಾರದು ಎಂದರು.

ಸಮಾರಂಭವನ್ನು ಮೆಕೆಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಸತ್ಯನಾರಾಯಣ, ಎಂಐಟಿಇ ಕಾಲೇಜಿನ ಡೀನ್ ಡಾ.ದಿವಾಕರ ಶೆಟ್ಟಿ ಹಾಗೂ ಹೈಡಾಕ್ ಸಂಸ್ಥೆಯ ಚೇತನ್ ರಾಜದೇವ್ ಮಾತನಾಡಿದರು. ಕಾರ್ಯಕ್ರಮವನ್ನು ಸಹ-ಪ್ರಾಧ್ಯಾಪಕ ಪ್ರವೀಣ್ ಶೆಣೈ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News