ಸಾಂಸ್ಕೃತಿಕ ವಿಚಾರಗಳಿಂದ ಹೃದಯ ಬೆಸೆಯುವ ಕೆಲಸ: ಅಂಬಾತನಯ ಮುದ್ರಾಡಿ

Update: 2019-09-15 16:24 GMT

ಉಡುಪಿ, ಸೆ. 15: ಸಾಂಸ್ಕೃತಿಕ ವಿಚಾರಗಳು ಹೃದಯವನ್ನು ಬೆಸೆಯುವ ಕೆಲಸ ಮಾಡುತ್ತದೆ. ಇಂದರಿಂದ ಹೊಸ ಚೈತನ್ಯ ಶಕ್ತಿ ತುಂಬಲು ಸಾಧ್ಯ ಎಂದು ಹಿರಿಯ ವಿದ್ವಾಂಸ ಅಂಬಾತನಯ ಮುದ್ರಾಡಿ ಹೇಳಿದ್ದಾರೆ.

 ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಸಂಸ್ಕೃತಿ ಪ್ರತಿಷ್ಠಾನದ ಉದ್ಘಾಟನೆ, ನಾಟಕೋತ್ಸವ, ಸಾಕ್ಷಚಿತ್ರ ಬಿಡುಗಡೆ ಹಾಗೂ ಯುವ ಪ್ರತಿಭೆಗಳ ಭಾವಾಭಿವ್ಯಕಿತಿ ಕಾರ್ಯಕ್ರಮದಲ್ಲಿಉಡುಪಿ ವಿಶ್ವನಾಥ ಶೆಣೈ ಅವರ ಜೀವನ ಚರಿತ್ರೆಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆ ವಹಿಸಿದ್ದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್ ಅಂಬಾತನಯ ಕಂಡ ಅಹಲ್ಯಾ ಭಾವಯಾನ, ಏಕಾಯಣ, ರಂಗ ಪ್ರಯೋಗದ ಆಮಂತ್ರಣ ಬಿತ್ತಿ ಪತ್ರವನ್ನು ಅನಾವರಣಗೊಳಿಸಿದರು. ಸಮಾಜ ಸೇವಕ ವಿಶ್ವನಾಥ ಶೆಣೈ, ಅಂತಾರಾಷ್ಟ್ರೀಯ ಜಾದೂಗಾರ ಪ್ರೊ.ಶಂಕರ್, ಪತ್ರಕರ್ತ ಜನಾರ್ದನ ಕೊಡ ವೂರು, ಉದ್ಯಮಿ ಎಂ.ಎಸ್.ವಿಷ್ಣು ಉಪಸ್ಥಿತರಿದ್ದರು.

ಸುಳ್ಯ ರಂಗಮನೆಯ ಮನುಜ ನೇಹಿಗ ಅವರು ದಶ ಕಲಾ ಕೌಶಲ ಹಾಗೂ ಭಾವನಾ ಅವರು ಅಂಬಾತನಯ ಮುದ್ರಾಡಿ ಕಂಡ ಅಹಲ್ಯಾ ಭಾವಯಾಮ, ಏಕಾಯಣ, ರಂಗ ಪ್ರಯೋಗವನ್ನು ಪ್ರಸ್ತುತ ಪಡಿಸಿದರು. ಶಿಲ್ಪ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News